ನಿಡ್ಪಳ್ಳಿ: ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು ಪಾಣಾಜೆ ಇದರ ವತಿಯಿಂದ 19ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಸೆ.14 ರಂದು ಧಾರ್ಮಿಕ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಆರ್ಲಪದವು ರಣಮಂಗಲ ಸಭಾಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 8.30ಕ್ಕೆ ಬಾಲಕೃಷ್ಣ ಮಣಿಯಾಣಿ ಪಡ್ಯಂಬೆಟ್ಟು ಇವರಿಂದ ದೀಪ ಪ್ರಜ್ವಲನೆ, ಗಣಹೋಮ, ನಂತರ ಭಜನಾ ಕಾರ್ಯಕ್ರಮ, ಗಂಟೆ 11ಕ್ಕೆ ಶ್ರೀ ಕೃಷ್ಣಾರ್ಪಣ ಪೂಜೆ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಂತರ ಪಲ್ಲಪೂಜೆ ಅನ್ನಸಂತರ್ಪಣೆ ನಡೆಯಲಿದೆ.
ಪುರುಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಹಾಗೂ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಸಂಜೆ ಗಂಟೆ 6ರಿಂದ ಪಾಣಾಜೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸಿಂಗಾರಿ ಮೇಳ, ನಾಸಿಕ್ ಬ್ಯಾಂಡ್ , ಸುಡುಮದ್ದು ಪ್ರದರ್ಶನದೊಂದಿಗೆ ಆಹ್ವಾನಿತ ತಂಡಗಳ ಅಟ್ಟಿಮಡಿಕೆ ಮೈನವಿರೇಳಿಸುವ ಸಾಹಸ ಪ್ರದರ್ಶನ ನಡೆಯಲಿದೆ.
ಮಧ್ಯಾಹ್ನ ಗಂಟೆ 2.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಮಧ್ಯಾಹ್ನ ಗಂಟೆ 1 ರಿಂದ ಶಿವಂ ಡ್ಯಾನ್ಸ್ ಆಕಾಡೆಮಿ ವಿಟ್ಲ ಇವರಿಂದ ಗಾನ ನೃತ್ಯ ಸಂಭ್ರಮ. ವಿಶೇಷ ಆಕರ್ಷಣೆಯಾಗಿ ಸು.ಫ್ರಮ್. ಸೋ ಚಲನಚಿತ್ರ ತಂಡ ಭಾಗವಹಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.