ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ ಸೆ.16 ರಂದು ಸಮೃದ್ಧಿ ಸಭಾಂಗಣದಲ್ಲಿ ಇಂಜಿನಿಯರ್ ಸಂತೋಷ್ ಶೆಟ್ಟಿರವರನ್ನು ಸನ್ಮಾನಿಸುವ ಮೂಲಕ ಇಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿ, ಹಿರಿಯ ವಾಸ್ತುಶಿಲ್ಪಿ ಸಚ್ಚಿದಾನಂದರವರು ಇಂಜಿನಿಯರ್ ಸಂತೋಷ್ ಶೆಟ್ಟಿರವರನ್ನು ಸನ್ಮಾನಿಸಿ ಮಾತನಾಡಿ, ನಮ್ಮ ರಾಜ್ಯ ಮತ್ತು ದೇಶದಲ್ಲಿ ಕೈಗಾರಿಕೆ, ನೀರಾವರಿ ಹಾಗೂ ನಿರ್ಮಾಣ ಕ್ಷೇತ್ರಕ್ಕೆ ಸರ್ ವಿಶ್ವೇಶ್ವರಯ್ಯ ಇವರ ಕೊಡುಗೆಗಳನ್ನು ವಿವರಿಸಿದರು. ದಣಿವರಿಯದ ಉದ್ಯಮಶೀಲತೆ ಮತ್ತು ಸೇವಾ ಚಟುವಟಿಕೆಗಳಿಗಾಗಿ ಸನ್ಮಾನಿತ ಸಂತೋಷ ಶೆಟ್ಟಿ ಅವರನ್ನು ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂತೋಷ್ ಶೆಟ್ಟಿ ಅವರು , ನಿರ್ಮಾಣ ಕ್ಷೇತ್ರದಲ್ಲಿ ತಮ್ಮ ಪಯಣದಲ್ಲಿ ಅವಕಾಶ ನೀಡಿ ಸಹಕರಿಸಿದ ಮಿತ್ರರು ಮತ್ತು ರೋಟರಿ ಸ್ನೇಹಿತರ ಸಹಕಾರ ವನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಕ್ಲಬ್ ಸದಸ್ಯರಾಗಿರುವ ಇಂಜಿನಿಯರ್ಸ್ ಗಳಾದ ಪ್ರದೀಪ್ ಪೂಜಾರಿ, ಜಯಪ್ರಕಾಶ್ ಎ.ಎಲ್, ಅಭಿಜ್ಞ ಪ್ರಹಾಸ್, ಶಿವರಾಮ ಎಂ ಎಸ್ ಮತ್ತು ಅಶೋಕ್ ನಾಯ್ಕ್ ಹಾಗೂ ಮುಖ್ಯ ಅತಿಥಿ ಸಚ್ಚಿದಾನಂದ್ ಇವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ಕ್ಲಬ್ ಅಧ್ಯಕ್ಷ ಚಂದ್ರಹಾಸ ರೈ ಬಿ ಅಧ್ಯಕ್ಷತೆ ವಹಿಸಿದ್ದರು. ಶಾಂತಕುಮಾರ್ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಮುಕ್ವೆ ಸ್ವಾಗತಿಸಿ, ಜತೆ ಕಾರ್ಯದರ್ಶಿ ಜಗನ್ನಾಥ ಅರಿಯಡ್ಕ ವಂದಿಸಿದರು. ಡಾ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.