ಪುತ್ತೂರು : ಕಳೆದ 8 ವರ್ಷಗಳಿಂದ ಕೆ.ಎಸ್ .ಆರ್.ಟಿ.ಸಿ ವಾಣಿಜ್ಯ ಸಂಕೀರ್ಣದ ನೆಲ ಮಹಡಿ , ಗಾಂಧಿಕಟ್ಟೆಗೆ ಸಮೀಪವಾಗಿ ವ್ಯವಹರಿಸುತ್ತಿದ್ದ ಆಶೋಕ್ ರಾವ್ ಬಪ್ಪಳಿಗೆ ಇವರ ಮಾಲೀಕತ್ವದ ಆದ್ಯ ಬ್ಯಾಗ್ ಕಲೆಕ್ಷನ್ಸ್ ಇದರ ಸಹಸಂಸ್ಥೆ ಮಿಸ್ಟರ್ ಆರ್ಯಾಸ್ ಮೆನ್ಸ್ ವೇರ್ ಸೆ.26 ರಂದು ಧಾರ್ಮಿಕ ಕೈಂಕರ್ಯದೊಂದಿಗೆ ಆದ್ಯ ಬ್ಯಾಗ್ ಮಳಿಗೆ ಸಮೀಪದಲ್ಲಿಯೇ ಶುಭಾರಂಭಗೊಂಡಿತು.
ಅರ್ಚಕ ಕೃಷ್ಣ ಭಟ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿ , ಶುಭವನ್ನು ಹಾರೈಸಿದರು. ಮಾಲೀಕರ ಸಹೋದರ ಭರತ್ ರಾವ್ ಮತ್ತು ಅವರ ಪತ್ನಿ ನಂದಿನಿ ಭರತ್ ದಂಪತಿ ಜತೆಯಾಗಿ ನೂತನ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿದರು.

ಆ ಬಳಿಕ ದೀಪ ಪ್ರಜ್ವಲನೆ ಕಾರ್ಯವನ್ನು ಮುಖ್ಯರಸ್ತೆ ನ್ಯೂ ದಿನೇಶ್ ಭವನ ಹೊಟೇಲ್ ಇದರ ಮಾಲೀಕ ಗಿರಿಧರ್ ಶೆಣೈ ನೆರವೇರಿಸಿ , ಶ್ರೆಯೋಭಿವೃದ್ಧಿಗೆ ಹರಸಿದರು.ಪುಡಾ ಮಾಜಿ ಅಧ್ಯಕ್ಷ ಭಾಮಿ ಆಶೋಕ್ ಶೆಣೈ , ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು , ಭಾಮಿ ಜಗದೀಶ್ ಶೆಣೈ , ಉದ್ಯಮಿ ಪ್ರಸನ್ನ ಶೆಟ್ಟಿ ಸಿಝ್ಲರ್ , ಶರತ್ ಆಳ್ವ ಕೂರೇಲು , ಮೋನು ಬಪ್ಪಳಿಗೆ , ನಗರಸಭಾ ನಾಮನಿರ್ದೇಶಿತ ಸದಸ್ಯ ಶರೀಫ್ ಬಲ್ನಾಡು ಇವರೆಲ್ಲರೂ ಕೂಡ ನೂತನ ಮಳಿಗೆಯ ಏಳಿಗೆಗೆ ಹರಸಿ ,ಹಾರೈಸಿದರು.
ನೀತು ನಗರ ,ಗುರದೇವ ಫ್ರೂಟ್ಸ್ ಮಾಲೀಕ ದೇವದಾಸ್ , ದಾಮೋದರ್ ಶೆಣೈ ,ಜಮಾಲ್ ಬಪ್ಪಳಿಗೆ ,ಹರೀಶ್ ಬಪ್ಪಳಿಗೆ ,ರಾಜೇಶ್ ಬಪ್ಪಳಿಗೆ , ಕಾರ್ತಿಕ್ ಭಕ್ತ , ಧರಿಶ್ ಹೊಳ್ಳ , ಸಂಜಯ್ ಶೆಟ್ಟಿ ,ರಿತೇಶ್ ರಾವ್ , ಮಾಲೀಕ ಆಶೋಕ್ ರಾವ್ ಸಹೋದರಿ ಅನಿತಾ ಮತ್ತು ರವಿ ಶಂಕರ್ ಪ್ರಸಾದ್ ದಂಪತಿ ಮಂಗಳೂರು , ಅತ್ತೆ ಮಾವ ಹೇಮನಾಥ ಮತ್ತು ಶೈಲಜಾ ದಂಪತಿ ಕುಂಬಳೆ ಸಹಿತ ಹಲವರು ಶುಭವೇಳೆಯಲ್ಲಿ ಹಾಜರಿದ್ದರು.

ಸಿಬಂದಿಗಳಾದ ಅಯಾಝ್ ಸವಣೂರು ,ಮನ್ಸೂರು ,ಆಫಿಲ್ ,ಆದಿಲ್ ಮತ್ತು ರಾಮಚಂದ್ರ ವಿವಿಧ ರೀತಿ ಸಹಕಾರ ನೀಡಿದರು. ಆಶೋಕ್ ರಾವ್ ,ಮೃದುಲಾ ಆಶೋಕ್ ಹಾಗೂ ಮಕ್ಕಳಾದ ಆರ್ಯಾ ,ಆದ್ಯ ಎಲ್ಲರನ್ನೂ ಸ್ವಾಗತಿಸಿ , ವಂದಿಸಿದರು. ಆಶಿಕ್ ಕುಟ್ಟಿ ನಿರೂಪಿಸಿದರು.