ಪುತ್ತೂರು : ಕಳೆದ ಹಲವಾರು ವರುಷಗಳಿಂದ ಏಳ್ಮುಡಿ , ಸುಳ್ಯ , ಕುಂಬ್ರ ಮತ್ತು ಎಡಮಂಗಲ ಈ ಮೊದಲಾದೆಡೆ ವ್ಯವಹರಿಸುತ್ತಿದ್ದ ಫ್ರೆಂಡ್ಸ್ ಬೇಕ್ ಇದರ ಐದನೇಯ ಶಾಖೆ ಇಲ್ಲಿನ ರೈಲ್ವೇ ನಿಲ್ದಾಣ ರಸ್ತೆಯ ಬಳಿಯ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.
ನೂತನ ಶಾಖೆಯ ಉದ್ಘಾಟನೆಯನ್ನು ಲಕ್ಷ್ಮೀದೇವಿ ಬೆಟ್ಟದ ಧರ್ಮದರ್ಶಿ ಐತ್ತಪ್ಪ ಸಪಲ್ಯ ದೀಪ ಪ್ರಜ್ವಲನೆ ನೆರವೇರಿಸಿ ,ಶುಭ ಹಾರೈಸಿದರು. ಅರ್ಚಕ ಸಂತೋಷ್ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಕೊಟ್ಟರು. ಈ ವೇಳೆ ಮಾಲೀಕ ಶೇಖರ್ ಉದ್ದಡ್ಕ ಬೆಳ್ಳಿಪ್ಪಾಡಿ ಇವರ ತಾಯಿ ಲೀಲಾವತಿ , ಸಹೋದರರಾದ ಗುಣಕರ ಶ್ರಾವಣಿ ದಂಪತಿ ಮತ್ತು ಸತೀಶ್ ಮಮತಾ ದಂಪತಿ , ಸಹೋದರಿ ಪುಷ್ಪವತಿ ರತ್ನಾಕರ ದಂಪತಿ , ಅತ್ತೆ ಮಾವ ಬಾಲಪ್ಪ ಪ್ರೇಮ ದಂಪತಿ ಬಲ್ನಾಡು , ಚಿಂತನಾ , ತನ್ವಿ , ಹರ್ಷಲ್ ಮತ್ತು ಭಿಶ್ಮೀತಾ ಸಹಿತ ಹಲವರು ಹಾಜರಿದ್ದರು.
ಮಾಲೀಕ ಶೇಖರ್ ಬೆಳ್ಳಿಪಾಡಿ ಮಾತನಾಡಿ , ಕಳೆದ ಹಲವರು ವರ್ಷಗಳಿಂದ ಫ್ರೆಂಡ್ಸ್ ಬೇಕ್ ಸಂಸ್ಥೆಯು ಗುಣಮಟ್ಟದ ಕೇಕುಗಳು , ಮಿಕ್ಸರ್ , ಬ್ರೆಡ್ಡು , ಬನ್ ,ರಸ್ಕ್ , ಪಪ್ಸ್ ತಯಾರಿಕೆ ಮತ್ತು ಮಾರಾಟ ಹಾಗೂ ಲೈನ್ ಸೇಲ್ ವ್ಯವಹಾರವನ್ನು ಅತ್ಯುತ್ತಮ ರೀತಿ ನಿರ್ವಹಿಸಿಕೊಂಡು ಬಂದ್ದಿದ್ದು ,ಇದೀಗ ಬೆಲ್ಲದ ಕೇಕ್ ಫ್ರೆಂಡ್ಸ್ ಬೇಕ್ ವಿಶೇಷ ತಿನಿಸು ಎಂದು ತಿಳಿಸಿದ ಅವರು ,
ಪ್ರೀತಿಯ ಗ್ತಾಹಕರು ಮುಂದೆಯು ತಮ್ಮ ಸಹಕಾರ ನೀಡುವಂತೆ ವಿನಂತಿಸಿದರು. ಪತ್ನಿ ಪವಿತ್ರ ಶೇಖರ್ ಮಕ್ಕಳಾದ ವಿನೀಶ್ ಹಾಗೂ ತನೀಶ್ ಸ್ವಾಗತಿಸಿ , ವಂದಿಸಿದರು.