ಪುತ್ತೂರು: ಇಬ್ಬರು ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಒಳಮೊಗ್ರು ನಿವಾಸಿ ಮೋನಿಶಾ (23ವ) ಮತ್ತು ಮಂಡ್ಯ ಪಾಂಡವಪುರ ನಿವಾಸಿ ದಿವ್ಯಾ (20ವ) ನಾಪತ್ತೆಯಾದವರು. ಇಬ್ಬರು ಮಂಡ್ಯದ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಾಲ್ಕು ದಿನಗಳ ಹಿಂದೆ ಅವರಿಬ್ಬರೂ ಮೋನಿಶಾ ಮನೆಗೆ ಬಂದಿದ್ದರು. ಅಲ್ಲಿಂದ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರೂ ಮೂಗಿಯಾಗಿರುತ್ತಾರೆ (ಮಾತನಾಡಲು ಆಗುವುದಿಲ್ಲ, ಡಫ್ & ಡಮ್ ಮೂಲಕ ಮಾತನಾಡುತ್ತಾರೆ) ಮಾಹಿತಿ ದೊರೆತಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ 9480805363, 9480805300 ಸಂಪರ್ಕಿಸುವಂತೆ ಇಲಾಖಾ ಪ್ರಕಟಣೆ ತಿಳಿಸಿದೆ.