ಪುತ್ತೂರು:ವಿದ್ಯಾಭಾರತಿ ಕರ್ನಾಟಕ ವತಿಯಿಂದ ಅಕ್ಟೋಬರ್ 6 ಮತ್ತು 7ರಂದು ಜನಸೇವಾ ವಿದ್ಯಾಕೇಂದ್ರ ಚನ್ನೇನಹಳ್ಳಿ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಗಳಿಸಿ ಹಾಸನದಲ್ಲಿ ನಡೆಯಲಿರುವ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಆತ್ಮಿ ಕೆ ಎಲ್ (ಲಕ್ಷ್ಮಣ ಗೌಡ ಮತ್ತು ಅಶ್ವಿನಿ ದಂಪತಿಗಳ ಪುತ್ರಿ) 100,200 ಮೀಟರ್ ಮತ್ತು 4×100 ರಿಲೇ ಪ್ರಥಮ ಸ್ಥಾನ, ವಂಶಿತಾ (ವಸಂತ ಕುಮಾರ್ ಮತ್ತು ಸುಜಾತಾ ದಂಪತಿಗಳ ಪುತ್ರಿ) 600 ಮೀಟರ್, ಉದ್ದ ಜಿಗಿತ ಪ್ರಥಮ, 4×100 ರಿಲೇಯಲ್ಲಿ ಪ್ರಥಮ ಸ್ಥಾನ, ದಿಶಾ ಬಿ (ಪುರುಷೋತ್ತಮ ಮತ್ತು ಸವಿತಾ ದಂಪತಿಗಳ ಪುತ್ರಿ) 4×100 ರಿಲೇ ಪ್ರಥಮ ಸ್ಥಾನ, ನಿಶ್ಮಾ ( ಪ್ರದೀಪ್ ಮತ್ತು ಪ್ರಶಾಂತಿ ದಂಪತಿಗಳ ಪುತ್ರಿ) ಚಕ್ರಎಸೆತದಲ್ಲಿ ಪ್ರಥಮಸ್ಥಾನ, ಸಾನ್ವಿ ಆನಂದ್ (ಆನಂದ್ ಮತ್ತು ವಾಣಿಶ್ರೀ ದಂಪತಿಗಳ ಪುತ್ರಿ) 4×100 ರಿಲೇಯಲ್ಲಿ ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
14ರ ವಯೋಮಾನದ ಬಾಲಕರಲ್ಲಿ ಶರ್ವಿನ್ (ಚಿತ್ರನಾಯಗಂ ಮತ್ತು ಪ್ರವೀಣಾ ಕುಮಾರಿ ದಂಪತಿಗಳ ಪುತ್ರ) 80 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
17ರ ವಯೋಮಾನದ ಬಾಲಕಿಯರಲ್ಲಿ ದಿವಿಜ್ಞಾ (ಶಿವಪ್ರಸಾದ್ ಮತ್ತು ಪವಿತ್ರಾ ದಂಪತಿಗಳ ಪುತ್ರಿ) 100, 200, 400 ಮೀ ಮತ್ತು 4×100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ, ಕ್ಷಮಾ ಜೆ ರೈ (ಜಗದೀಶ ರೈ ಮತ್ತು ಶೋಭಾ ದಂಪತಿಗಳ ಪುತ್ರಿ) 4×100 ಮೀಟರ್ ರಿಲೇ ಪ್ರಥಮ ಹಾಗೂ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ಸಾನ್ವಿತಾ ನೆಕ್ಕರೆ (ಉಮೇಶ್ ಮತ್ತು ಕವಿತಾ ದಂಪತಿಗಳ ಪುತ್ರಿ) 4×100 ಮೀ ರಿಲೇ ಪ್ರಥಮ ಸ್ಥಾನ, 400 ಮೀಟರ್ ಹರ್ಡಲ್ಸ್ ದ್ವಿತೀಯ ಸ್ಥಾನ, ಶ್ರೀರಕ್ಷಾ (ದೇವರಾಜ್ ಮತ್ತು ವಾಣಿಶ್ರೀ ದಂಪತಿಗಳ ಪುತ್ರಿ) 4×100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಮತ್ತು ನಿಧಿಶ್ರೀ (ದೇರಣ್ಣ ಗೌಡ ಮತ್ತು ಹೇಮಲತಾ ದಂಪತಿಗಳ ಪುತ್ರಿ) 100 ಮೀಟರ್ ಹರ್ಡಲ್ಸ್ ನಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. ಮಾತ್ರವಲ್ಲದೇ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ದಿವಿಜ್ಞಾ ವೈಯಕ್ತಿಕ ಚಾಂಪಿಯನ್ ಆಗಿ ವಿಶೇಷ ಸಾಧನೆಗೈದಿರುತ್ತಾರೆ.
ಈ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿಜೇತರು ಹಾಸನದಲ್ಲಿ ನಡೆಯಲಿರುವ ವಿದ್ಯಾಭಾರತಿಯ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈಯವರು ತಿಳಿಸಿರುತ್ತಾರೆ.