ಪುತ್ತೂರು: ಸಿಡಿಲು ಬಡಿದು ಹಾನಿಗೊಳಗಾದ ನಿಡ್ಪಳ್ಳಿ ನಿವಾಸಿ ರಾಮಣ್ಣ ಪೂಜಾರಿಯವರ ಮನೆ ದುರಸ್ತಿಗೆ ಬ್ಲಾಕ್ ಕಾಂಗ್ರೆಸ್ ಸೇವಾ ಸಹಾಯ ಹಸ್ತ ನಿಧಿಯಿಂದ ಆರ್ಥಿಕ ನೆರವು ನೀಡಲಾಯಿತು.
ರಾಮಣ್ಣ ಪೂಜಾರಿಯವರ ಪುತ್ರ ನವೀನ್ ಅವರಿಗೆ ಶಾಸಕ ಅಶೋಕ್ ರೈ ಅವರು 5000 ರೂ. ಚೆಕ್ ವಿತರಣೆ ಮಾಡಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪಸ್ಥಿತರಿದ್ದರು.