ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪಿಸಿದವರು ಶಹೀದ್ ಸಾಧನೆ: ಯೇನೆಪೋಯ ಅಬ್ದುಲ್ಲ ಕುಂಞ ಶ್ಲಾಘನೆ
ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ( ಮೀಫ್) ದ ಕ. ಉಡುಪಿ, ಕೊಡಗು ಶಿವಮೊಗ್ಗ, ಚಿಕ್ಕ ಮಗಳೂರು ಮತ್ತು ಹಾಸನ ಜಿಲ್ಲೆಗಳ ಒಕ್ಕೂಟದ ವತಿಯಿಂದ, ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾಗಿ ನೇಮಕಾಗೊಂಡ ಟಿ.ಎಂ. ಶಾಹಿದ್ ರವರನ್ನು ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಮಾಡಿದ ಯೇನೆಪೋಯ ಡೀಮ್ಡ್ ಯೂನಿವರ್ಸಿಟಿ ಚಾನ್ಸಲರ್ ಯೇನೆ ಪೋಯ ಅಬ್ದುಲ್ಲ ಕುoಞ ಮಾತನಾಡಿ ಟಿ.ಎಂ. ಶಹಿದ್ ರವರು ಗೂನಡ್ಕದಂತಹ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವುದು ಅಭಿನಂದನಾರ್ಹ ಎಂದರು.
ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ,ಕರ್ನಾಟಕ ಅಲೈಡ್ ಹೆಲ್ತ್ ಸೈನ್ಚ್ ರಾಜ್ಯಾಧ್ಯಕ್ಷ ಯು.ಟಿ. ಇಫ್ತಿಕಾರ್ ಅಲಿ ಗೌರವಾಧ್ಯಕ್ಷ ಉಮ್ಮರ್ ಟೀಕೇ, ಬ್ಯಾರಿ’ಸ್ ಗ್ರೂಪ್ ಎಂ. ಡಿ. ಸಯ್ಯದ್ ಬ್ಯಾರಿ, ಮೊದಲಾದವರು ಉಪಸ್ಥಿತರಿದ್ದರು.