





ಕಡಬ: ಇಲ್ಲಿನ ಅನುಗ್ರಹ ಸಭಾಭವನದ ಬಳಿ ಕಾರು ಮತ್ತು ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ನ.5ರಂದು ಸಂಜೆ ನಡೆದಿದೆ.



ಅಪಘಾತದಲ್ಲಿ ಆಟೋ ಚಾಲಕ ಆದಂ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವ ಕಳಾರ ಗಾಯಗೊಂಡಿದ್ದು, ಅವರನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.





ಕಳಾರ ಭಾಗದಿಂದ ಕಡಬ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ, ಅನುಗ್ರಹ ಸಭಾಭವನದ ಬಳಿಯ ಗೂಡಂಗಡಿಯ ಬಳಿ ಮುಖ್ಯ ರಸ್ತೆಗೆ ಕೆಳಭಾಗದಿಂದ ಏಕಾಏಕಿ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಮಗುಚಿ ಬಿದ್ದು ನಜ್ಜುಗುಜ್ಜಾಗಿದ್ದು, ಕಾರಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.










