ಸಂತ ಫಿಲೋಮಿನಾ ಕಾಲೇಜಿನ 1992-93ನೇ ಸಾಲಿನ ಬಿ.ಎ ಬ್ಯಾಚಿನ ವಿದ್ಯಾರ್ಥಿಗಳ ಪುನರ್ಮಿಲನ

0

ಪುತ್ತೂರು: ಮಾಯಿದೆ ದೇವುಸ್ ಚರ್ಚಿನ ಅಧಿನ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ 1992-93ನೇ ಸಾಲಿನ ಬಿ.ಎ ಬ್ಯಾಚಿನ ವಿದ್ಯಾರ್ಥಿಗಳ ಪುನರ್ಮಿಲನ ಸಮಾರಂಭವು ನ.9 ರಂದು ಕಾಲೇಜಿನ ಸ್ನಾತ್ತಕೋತ್ತರ ವಿಭಾಗದ ಸಭಾಭವನದಲ್ಲಿ ಜರಗಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ.ಪ್ರಕಾಶ್ ಮೊಂತೆರೊ ಕಾಲೇಜಿನ ಬೆಳವಣಿಗೆಗೆ ದೇಶ ವಿದೇಶದಲ್ಲಿ ನೆಲೆಸಿರುವ ಶಿಷ್ಯ ವೃಂದವೇ ಕಾರಣ,ಜಗತ್ತಿನೆಲ್ಲೆಡೆ ತಮ್ಮ ಜ್ಞಾನ,ಕೌಶಲ್ಯತೆ ಪ್ರಸಾರ ಮಾಡಿದಾಗ ಸಂಸ್ಥೆ ವಿಶ್ವ ವಿಖ್ಯಾತಿ ಪಡೆಯುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ತಾವು ಸಮಯ ಸಿಕ್ಕಾಗ ಕಲೇಜಿಗೆ ಭೇಟಿ ನೀಡಿ, ಸಂಸ್ಥೆಯ ಮೇಲೆ ನಿಮಗಿರುವ ಅಭಿಮಾನ ದೊಡ್ಡದು ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ.ರಾಮಕೃಷ್ಣ ರಾವ್ ಗುರುಶಿಷ್ಯರ ಸಂಬಂಧ, ಸಂಸ್ಥೆಯ ಹಿತೈಷಿಗಳ ಸಹಾಯ ಫಿಲೋಮಿನಾ ಕಾಲೇಜಿನ ಔನ್ಯುತ್ತಕ್ಕೆ ಕಾರಣವೆಂದರು. ಪ್ರೋ.ದತ್ತಾತ್ರೇಯ ರಾವ್ ಸುಂದರ ಹಾಡಿನ ಮೂಲಕ ನೆರೆದವರನ್ನು ರಂಜಿಸಿದರು. ನಿವೃತ್ತ ಉಪ ಪ್ರಾಚಾರ್ಯ ಪ್ರೋ.ವಿಷ್ಣು ಭಟ್, ಹಿರಿಯ ವಿದ್ಯಾರ್ಥಿಗಳಾದ ದೀಪಕ್,ಗುರುಪ್ರಸಾದ್ ಹೆಬ್ಬಾರ್,ಅಮೃತ ಕಿರಣ ರೈ, ಎನ್‌ಸಿಸಿ ಪ್ರಶಿಕ್ಷಣದ ಮೂಲಕ ಹಲವು ರಾಜ್ಯಗಳಲ್ಲಿ ನಡೆಸಿದ ಸೈಕಲ್ ರ್‍ಯಾಲಿ ಮೂಲಕ ರಾಷ್ರೀಯ ಏಕತೆಯ ಸಂದೇಶ ಪ್ರಚಾರ ಮಾಡಿದ ಹಿಂದಿನ ದಿನಗಳನ್ನು ಮೆಲುಕು ಹಾಕಿದರು. ಇತಿಹಾಸ ವಿಭಾಗದ ನಿವೃತ್ತ ಅಧ್ಯಾಪಕ ಝಬೈರ್ ತಮ್ಮ ಬೆಳವಣಿಗೆಗೆ ಉತ್ತಮ ಗುರುಗಳ ಪ್ರೋತ್ಸಾಹ ಕಾರಣವೆಂದರು.

ಉಪಪ್ರಾಚಾರ್‍ಯ ಡಾ. ವಿಜಯ ಕುಮಾರ್ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನದ ಉದ್ದೇಶ ತಿಳಿಸಿದರು. ಪುರಸಭಾ ಮಾಜಿ ಉಪಾಧ್ಯಕ್ಷ ವಿನಯ ಭಂಡಾರಿ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡರು. 60ರ ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತ ಫಿಲೋಮಿನಾ ಕಾಲೇಜಿನ ದಾಖಲೆಯಾಗಿತ್ತು. ಇದರ ಹಿಂದೆ ಹಿರಿಯ ವಿದ್ಯಾರ್ಥಿ ಹಾಗೂ ದೈಹಿಕ ಶಿಕ್ಷಕ ಡಾ. ಎಲಿಯಾಸ್ ಪಿಂಟೊ, ಬಾಬು ಶೆಟ್ಟಿ ಸಂಪ್ಯ, ಸೂರಜ್ ಶೆಟ್ಟಿ, ರಾಷ್ಟ್ರೀಯ ಕ್ರೀಡಾಳು ಸತೀಶ್ ರೈ ಶ್ರಮವಹಿಸಿ ವಿವಿಧ ಕಾರ್‍ಯಕ್ರಮಗಳ ಆಯೋಜಕರಾಗಿ ಕರ್ತವ್ಯ ನಿರ್ವಹಿಸಿದರು. ಜಯಪ್ರಕಾಶ್ ರೈ, ಅಂಚೆ ಕಚೇರಿಯ ಅಧಿಕಾರಿ ನವೀನಚಂದ್ರ , ಪ್ರಮೋದ ರಾವ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಹಿರಿಯ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸತ್ಯ ಸಾಯಿ ವಿಹಾರದ ಅಧ್ಯಾಪಕ ಎ.ಕೆ.ಬ್ಯಾರಿ ಸ್ವಾಗತಿಸಿದರು.ಯೋಗಿಶ್ ಆಳ್ವ ಪ್ರಾರ್ಥಿಸಿದರು,ಅನುರಾಧ ವಿ. ನಾಯಕ್ ನಿರೂಪಿಸಿದರು, ವಕೀಲ ಜಗನ್ನಾಥ ರೈ ಧನ್ಯವಾದ ಸಲ್ಲಿಸಿದರು.ಕಾರ್‍ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು. ಕಲಿತ ತರಗತಿಗಳ ವೀಕ್ಷಣೆ ಹಾಗೂ ಸಹ ಭೋಜನ ನಡೆಯಿತು.


ಗುರುಗಳಿಗೆ ಸನ್ಮಾನ,ಧನ ಸಹಾಯ
60 ಹಿರಿಯ ವಿದ್ಯಾರ್ಥಿಗಳ ಸಮ್ಮಖದಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸುವ ಕಾರ್‍ಯಕ್ರಮ ನಡೆಯಿತು. ಪ್ರೊ. ರಾಮಕೃಷ್ಣ ಪೆರುವಾಜೆ, ಪ್ರೊ. ವಿಷ್ಣು ಭಟ್, ಪ್ರೊ.ದತ್ತಾತ್ರೇಯ ರಾವ್, ಪ್ರೊ. ಝುಬೇರ್, ಪ್ರಸ್ತುತ ಉಪ ಪ್ರಾಂಶುಪಾಲ ಡಾ|ವಿಜಯ್ ಕುಮಾರ್ ಅವರನ್ನು ಸ್ಮರಣಿಕೆ, ಶಾಲು, ಹೂ ಹಾರ ನೀಡಿ ಸನ್ಮಾನಿಸಲಾಯಿತು. ವಂ|ಡಾ|ಅಂತೋನಿ ಪ್ರಕಾಶ್ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ 1992-93 ಸಾಲಿನ ವಿದ್ಯಾರ್ಥಿಗಳು ಕಲಿತ ಕಾಲೇಜಿಗೆ ಧನ ಸಹಾಯ ನೀಡಿದರು. ಸಂಸ್ಥೆಯ ಬೆಳವಣಿಗೆಗೆ ಮುಂದೆಯೂ ಸಹಕರಿಸುವ ಭರವಸೆ ನೀಡಿದರು.

LEAVE A REPLY

Please enter your comment!
Please enter your name here