ಡಿ.2: ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ 42ನೇ ಯೋಜನೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

0

ಪುತ್ತೂರು: ಕೆಮ್ಮಾಯಿ ಭರತಪುರದಲ್ಲಿರುವ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ವತಿಯಿಂದ ಊರ ಪರವೂರ ಸಹೃದಯ ದಾನಿಗಳ ಸಹಕಾರದಿಂದ ಕಿಡ್ನಿ ಡಯಾಲಿಸಿಸ್ ರೋಗಿಗಳಿಗೆ ನೀಡಲಾಗುವ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯ 42ನೇ ಯೋಜನೆಯ ಕಾರ್ಯಕ್ರಮ ಡಿ.2 ರಂದು ಭರತಪುರದ ಸೇವಾಶ್ರಮದಲ್ಲಿ ನಡೆಯಲಿದೆ.

ಹಸಿದವರ ಪಾಲಿನ ಅನ್ನದಾತರಾಗಿ ತಮಗೆ ಅನುಕೂಲವಾಗುವಂತೆ ಆರ್ಥಿಕವಾಗಿ ಸಹಕರಿಸಬಹುದು. ಇದರ ಸೇವಾ ಚಟುವಟಿಕೆಗಳಿಗೆ ಧನಸಹಾಯ ನೀಡುವವರು ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು. ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80ಜಿ ಅನ್ವಯ ತೆರಿಗೆ ವಿನಾಯಿತಿ ಇದೆ. ಹೆಚ್ಚಿನ ಮಾಹಿತಿಗಾಗಿ 8660191937, 9663038148, 9972673038 ಸಂಪರ್ಕಿಸಬಹದು ಎಂದು ಸೇವಾಶ್ರಮದ ಚೇತನ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here