








ಅಶೋಕ್ ರೈ ನಮನ


ಪುತ್ತೂರು:ಡಿ.17ರಂದು ನಿಧನರಾಗಿರುವ ಪುತ್ತೂರು ನ್ಯಾಯಾಲಯದ ನಿವೃತ್ತ ಪ್ರಥಮ ದರ್ಜೆ ಗುಮಾಸ್ತ ಅಟ್ಲಾರು ಗಿರಿಯಪ್ಪ ಪೂಜಾರಿ ನೈತ್ತಾಡಿರವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ ಡಿ.28ರಂದು ಮಧ್ಯಾಹ್ನ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯಲ್ಲಿ ನಡೆಯಿತು.



ಬಳಿಕ ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಶ್ರದ್ಧಾಂಜಲಿ ಹಾಗೂ ವೈಕುಂಠ ಸಮಾರಾಧನೆ ನಡೆಯಿತು.ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಮೃತರ ಪತ್ನಿ ಶ್ರೀಮತಿ ಸರೋಜ, ಪುತ್ರ ಯಶವಂತ ಎ.,ಪುತ್ರಿ ಸುನೀತ, ಸೊಸೆ ನಿಶ್ಮಿತಾ, ಅಳಿಯ ಪದ್ಮನಾಭ ಪೂಜಾರಿ,ಮೊಮ್ಮಕ್ಕಳು, ಬಂಧು ಮಿತ್ರರು,ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










