






ಪುತ್ತೂರು: ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಮಹಾಭಾರತ ಗಾಂಧಾರಿಗೆ ದಿವ್ಯ ದೃಷ್ಟಿ, ದಿವ್ಯ ಶಕ್ತಿಯ ಮೂಲಕವೇ ಎಲ್ಲವೂ ಗೋಚರಿಸುತ್ತಿತ್ತುಎಂಬುದರ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ಇದೇ ಮಾದರಿಯಲ್ಲಿ ಪುತ್ತೂರಿನ ವರ್ಣಕುಟೀರದಲ್ಲಿ ಪ್ರಥಮ ಹಂತದ ಶಿಕ್ಷಣದಲ್ಲೇ ’ಗಾಂಧಾರಿ ವಿದ್ಯೆ’ ಒಲಿಸಿಕೊಂಡ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮೂಲಕ ಸಭೆಯಲ್ಲಿದ್ದವರೆನ್ನೆಲ್ಲ ಬೆರಗು ಮೂಡಿಸಿದರು.



ಹೌದು, ಹತ್ತಾರು ಮಕ್ಕಳು ತಾವು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಓದುವುದು, ಬರೆಯುವುದು, ಬಣ್ಣಗಳನ್ನು ಪತ್ತೆ ಹಚ್ಚುವುದು, ಚಿತ್ರಗಳಿಗೆ ಬಣ್ಣ ಹಚ್ಚುವುದು, ಗುರುತು ಚೀಟಿಯ ಚಿತ್ರವನ್ನು ನಿಖರವಾಗಿ ಹೇಳುವುದು ಎಲ್ಲರ ಗಮನ ಸೆಳೆದಿದ್ದಾರೆ. ಪುತ್ತೂರಿನ ಕಲ್ಲಾರೆಯಲ್ಲಿರುವ ವರ್ಣಕುಟೀರ ಕಲಾ ಶಿಕ್ಷಣದಲ್ಲಿ ಸಂಸ್ಥೆಯ 25 ವರ್ಷದ ಸಂಭ್ರಮದ ಅಂಗವಾಗಿ ನಾನಾ ರೀತಿಯ ಪ್ರಯೋಗಾತ್ಮಕ ಕಾರ್ಯಕ್ರಮಗಳು ನಡೆಯುತ್ತಿದ್ದು ಅದರಲ್ಲೂ ಒಂದಾದ ಮಕ್ಕಳ ಏಕಾಗ್ರತೆ, ನೆನಪಿನ ಶಕ್ತಿ, ಆತ್ಮವಿಶ್ವಾಸ ಹೆಚ್ಚಿಸುವ ದೃಷ್ಟಿಯಿಂದ ಸಂಸ್ಥೆಯಲ್ಲಿ ಕಳೆದ 13 ದಿನ ನಡೆದ ಗಾಂಧಾರಿ ವಿದ್ಯೆಯ ಪ್ರಥಮ ಹಂತದ ಶಿಕ್ಷಣ ಸಮಾರೋಪ ಜ.4ರಂದು ಸಂಜೆ ನಡೆಯಿತು.



ನರಿಮೊಗರು ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಅವರು ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳ ಅದ್ಭುತ ಪ್ರದರ್ಶನವನ್ನು ನೋಡಿ ಶುಭ ಹಾರೈಸಿದರು. ಇನ್ನೋರ್ವ ಅತಿಥಿ ಕೊಳಲು ವಾದಕ ವಿದ್ವಾನ್ ಗೋಪಾಲಕೃಷ್ಣ ಅವರು ಶುಭಾಂಶನಗೈದರು. ಗಾಂಧಾರಿ ವಿದ್ಯೆಯ ಗುರು ಶಿವಲಿಂಗ ಗುರುಪಾದ ಭಾಗಿ ಅವರು ವಿದ್ಯಾರ್ಥಿಗಳ ಮೂಲಕ ಗಾಂಧಾರಿ ವಿದ್ಯೆಯ ಸಾಧನೆಯನ್ನು ತೋರಿಸಿದರು. ಇದೇ ಸಂದರ್ಭ ಶಿಕ್ಷಣದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿದೆ:
ಮಕ್ಕಳಲ್ಲಿಲ ಏಕಾಗ್ರತೆ ಆತ್ಮವಿಶ್ವಾಸದ ಕೊರತೆ ಇತ್ತು. ಗಾಂಧಾರಿ ವಿದ್ಯೆ ಕಲಿಯಲು ಪ್ರಾರಂಭಿಸಿದ ಮೇಲೆ ದಿನದಿಂದ ದಿನಕ್ಕೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ. ಪ್ರಾಣಾಯಾಮ ಹಾಗೂ ಧ್ಯಾನವನ್ನು ಮಾಡುವುದರಿಂದ ಅವರಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎಂದು ಪೋಷಕರಾದ ಗೀತಾ, ವೆಂಕಟೇಶ್ವರ ಕಂಬಳಬೆಟ್ಟು ಅವರು ಅಭಿಪ್ರಾಯ ಪಟ್ಟರು. ಗಾಂಧಾರಿ ವಿದ್ಯೆ ಕಲಿಯತ್ತಿರುವ ವಿದ್ಯಾರ್ಥಿಗಳಾದ ಶ್ರೀವರ್ಧನ, ಗಗನ್, ಸಾತ್ವಿಕ್, ವಿಸ್ಮಯ್ ಮತ್ತು ಹಿಮನೀಶ್ ಗೌಡ ಕೆ ಅವರು 13 ದಿನದ ಶಿಕ್ಷಣದಲ್ಲಿ ನಮ್ಮ ದಿನಚರಿಯಲ್ಲಿ ಉತ್ತಮ ಬೆಳವಣಿಗೆ ಆಗಿದೆ ಎಂದು ತಿಳಿಸಿದರು.
ಕಲಿತ ವಿದ್ಯೆಯ ಪ್ರದರ್ಶನ:
ಗಾಂಧಾರಿ ವಿದ್ಯೆಯಲ್ಲಿ ತಮ್ಮ ದೇಹದ ಏಳು ಭಾಗಗಳಲ್ಲಿ ಅಂಗೈ ಮಧ್ಯಭಾಗ, ಕುತ್ತಿಗೆ ಎಡ, ಬಲಭಾಗ, ನೆತ್ತಿಯ ಭಾಗ, ಎಡಭಾಗದ ಕಾಲಿನ ಅಂಗಾಲಿನ ಭಾಗದ ಮೂಲಕ ಅವರು ಸ್ಪರ್ಶ ಶಕ್ತಿಯಿಂದ ಕಣ್ಣಿಗೆ ಬಟ್ಟೆಕಟ್ಟಿಕೊಂಡು ವಸ್ತುಗಳನ್ನು ಪತ್ತೆ ಹಚ್ಚುತ್ತಾರೆ, ಓದುತ್ತಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಈ ಕುರಿತು ವಿದ್ಯಾರ್ಥಿಗಳು ಪ್ರಾತ್ಯಕ್ಷಿತೆಯ ಮೂಲಕ ಕಲಿತ ವಿದ್ಯೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಕಣ್ಣು ಮುಚ್ಚಿ ಬಣ್ಣಗಳನ್ನು ಗುರುತಿಸುವುದು, ಪಠ್ಯ ಪುಸ್ತಕವನ್ನು ಓದುವ, ವ್ಯಕ್ತಿಯನ್ನು ಗುರುತಿಸುವ ಕಾರ್ಯವನ್ನು ಮಾಡಿದರು. ಗೀತಾಲಕ್ಷ್ಮೀ ಕೆದಿಕಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸವಾಲನ್ನು ಉತ್ತರ ಕೊಟ್ಟಾಗ ಸಾಧ್ಯವಾಯಿತು:
ಒಂದೊಂದು ಮಗುವಿಗೆ ತನ್ನದೇ ಅದ ಪ್ರತಿಭೆ ಇದೆ. ಅದನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ವರ್ಣಕುಟೀರ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಶಮಿಕಾ ವಿದ್ಯಾರ್ಥಿನಿಯ ಪ್ರತಿಭೆಯನ್ನು ಕೇಳಿದಾಗ ಆಕೆ ಗಾಂಧಾರಿ ವಿದ್ಯೆ ಕಲಿಯುತ್ತಿರುವ ಕುರಿತು ಮಾಹಿತಿ ಲಭ್ಯವಾಯಿತು. ಆಕೆಯ ಸಾಧನೆಯನ್ನು ನೋಡಿ ಅದನ್ನು ಬೆಳಕಿಗೆ ತರಲು ಗೋಲ್ಡನ್ ಬುಕ್ ಆಫ್ ರೆಕಾರ್ಡ್ಗೆ ಪ್ರಯತ್ನಿಸಿದೆ. ಈ ಸಂದರ್ಭ ಹಲವು ಕರೆಯೂ ಬಂತು. ಅದನ್ನು ನಯವಾಗಿ ಉತ್ತರಿಸದೆ ಆಕೆ ರೆಕಾರ್ಡ್ ಮಾಡಿದ ಬಳಿಕ ಪ್ರಶ್ನಿಸಿದವರಿಗೆ ಉತ್ತರವನ್ನೂ ನೀಡುವ ಮೂಲಕ ಸವಾಲಿಗೆ ಉತ್ತ ಕೊಡಲು ಸಾಧ್ಯವಾಯಿತು. ಮುಂದೆ ಇತರ ಮಕ್ಕಳಿಗೂ ಇದನ್ನು ಕರಗತಗೊಳಿಸಬೇಕೆಂದು ಉತ್ತಮ ಗುರುವನ್ನು ಹುಡುಕಿ ಅವರ ಮೂಲಕ ಇನ್ನಷ್ಟು ವಿದ್ಯಾರ್ಥಿಗಳಿಗೆ ಆ ವಿದ್ಯೆಯನ್ನು ನೀಡುವ ಕೆಲಸ ಮಾಡಿದ್ದೇನೆ.
ಪ್ರವೀಣ್ ವರ್ಣಕುಟೀರ
ಸಂಚಾಲಕರು ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ
ಕಠಿಣ ಪರಿಶ್ರಮ ಗಾಂಧರಿವಿದ್ಯೆ ಪಡೆಯಬಹುದು
ಏಕಕಾಲದಲ್ಲಿ ಸಾವಿರಾರು ಮಂದಿಗೆ ಜ್ಞಾನ ನೀಡುತ್ತಿದ್ದ ನಳಂದ, ತಕ್ಷಶಿಲಾದಲ್ಲಿ ಗುರುವಿನ ಪಾತ್ರ ಮಹತ್ವ. ಹಿಂದೆ ಗುರುವಿನ ಮೂಲಕ ಶಿಕ್ಷಣ ಪಡೆದು ಶಿಷ್ಯ ಗುರುವನ್ನು ಸೋಲಿಸಿದಾಗಲೇ ಗುರುವಿಗೆ ತೃಪ್ತಿಯಾಗುತ್ತಿತ್ತು. ಅದಕ್ಕಾಗಿ ಒಳ್ಳೆಯ ಗುರುವಿಗೆ ಒಳ್ಳೆಯ ಶಿಷ್ಯನೂ ಬೇಕಿತ್ತು. ಇವತ್ತು ಅದೇ ಮಾದರಿಯಲ್ಲಿ ಪ್ರವೀಣ್ ವರ್ಣಕುಟೀರದದಲ್ಲಿ ಒಳ್ಳೆಯ ಗುರುವಿನ ಗರಡಿಯಲ್ಲಿ ವಿದ್ಯಾರ್ಥಿಗಳು ಬೆಳೆಯುತ್ತಿರುವುದು ಸಂತೋಷ ಆಗುತ್ತಿದೆ. ಹಿಂದಿನ ಕಾಲದ ಶಿಕ್ಷಣ ಮೊದಲು ಸಂಸ್ಕಾರ, ಬಳಿಕ ಶಿಕ್ಷಣವಾಗಿತ್ತು. ಯಾಕೆಂದರೆ ಗಾಂಧಾರಿ ವಿದ್ಯೆಗೂ ಸಂಸ್ಕಾರ ಮುಖ್ಯ. ಅನುಭ ಪಡೆದಂತೆ ನಾವು ಸಾಧಕರಾಗುತ್ತೇವೆ. ಬುದ್ದಿಯನ್ನು ಶಾರ್ಫ್ ಮಾಡದೆ ನೇರವಾಗಿ ಗಾಂಧಾರಿ ವಿದ್ಯೆ ಬೇಕೆಂದರೆ ಸಾಧ್ಯವಿಲ್ಲ. ಕಠಿಣವಾದ ಪರಿಶ್ರಮ ಬೇಕು.
ಶಿವಲಿಂಗ ಗುರುಪಾದ ಭಾಗಿ










