






ನಿಡ್ಪಳ್ಳಿ; ಕಕ್ಕೂರು ಅಂಗನವಾಡಿಯಲ್ಲಿ ಜ.13 ರಂದು ನಡೆಯುವ ಬಾಲ ಮೇಳ ಕಾರ್ಯಕ್ರಮದ ಪ್ರಯುಕ್ತ ಜ.11 ರಂದು ಅಂಗನವಾಡಿಯ ವ್ಯಾಪ್ತಿಯ ಎಲ್ಲಾ ಮಕ್ಕಳು ಹಾಗೂ ಪೋಷಕರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಪುರೋಹಿತರಾದ ಬಾಲಕೃಷ್ಣ ಭಟ್ ಕಕ್ಕೂರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.



ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ರವಿಕಲಾ ಇವರು ತೆಂಗಿನಕಾಯಿ ಒಡೆದು ಸ್ಪರ್ಧೆಗೆ ಚಾಲನೆಯನ್ನು ನೀಡಿದರು. ವಾರ್ಡ್ ಸದಸ್ಯರಾದ ಮೊಯಿದು ಕುಂಞಿ ಕೋನಡ್ಕ ಉಪಸ್ಥಿತರಿದ್ದರು. ಶಾಲಿನಿ ಕಕ್ಕೂರು ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಶ್ಯಾಮಲಾ ಟೀಚರ್ ವಂದಿಸಿದರು.ಬಾಲ ವಿಕಾಸ ಸಮಿತಿ ಸದಸ್ಯರು,ಊರ ಹತ್ತು ಸಮಸ್ತರು ಸಹಕರಿಸಿದರು.










