ಬೆಂದ್ರ್ ತೀರ್ಥದಲ್ಲಿ ಎರಡು ಸಂಘಟನೆಗಳಿಂದ ಸ್ವಚ್ಚತಾ ಅಭಿಯಾನ 

0

ನಿಡ್ಪಳ್ಳಿ: ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ ಕ್ಷೇತ್ರ ಇರ್ದೆ ಗ್ರಾಮದ ಬೇಂದ್ರ್ ತೀರ್ಥ ಕ್ಷೇತ್ರದಲ್ಲಿ ಜ.11ರಂದು ಸ್ವಚ್ಛತಾ ಅಭಿಯಾನ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೊಜನೆ ಬಿ.ಸಿ ಟ್ರಸ್ಟ್ ಇದರ ಇರ್ದೆ ಬೆಟ್ಟಂಪಾಡಿ  ವಿಪತ್ತು ನಿರ್ವಹಣಾ ಘಟಕ ಮತ್ತು ಇರ್ದೆ ಶಿವಾಜಿ ಯುವ ಸೇನೆಯ ನೇತೃತ್ವದಲ್ಲಿ ತೀರ್ಥ ಗುಂಡಿ ಮತ್ತು ಕ್ಷೇತ್ರವನ್ನು ಸಂಪೂರ್ಣವಾಗಿ ಸ್ವಚ್ಚತೆ ಮಾಡಲಾಯಿತು. ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಸುಬ್ರಹ್ಮಣ್ಯ, ಸಂಯೋಜಕಿ ಪದ್ಮಾವತಿ.ಡಿ ಮತ್ತು ಸ್ವಯಂ ಸೇವಕರು ಹಾಗೂ ಶಿವಾಜಿ ಯುವ ಸೇನೆಯ ಅಧ್ಯಕ್ಷ ಧನ್ಯರಾಜ್, ಕಾರ್ಯದರ್ಶಿ ಮನೋಹರ್ ಮತ್ತು ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here