ಬೆಂಗಳೂರಿನ ಅರಮನೆ ಮೈದಾನದಲ್ಲಿ ಉದ್ಯಮಿ ಒಕ್ಕಲಿಗ ಎಫ್.ಸಿ. ಎಕ್ಸ್‌ಪೋ -2026

0

ಸಮುದಾಯದ ಸಂಘಟನೆ, ಉದ್ಯಮ ದೃಷ್ಟಿಯಿಂದ ಇದೊಂದು ಅತ್ಯುತ್ತಮ ಕಾರ್ಯಕ್ರಮ; ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ

ಬೆಂಗಳೂರು; ಉದ್ಯಮಿ ಒಕ್ಕಲಿಗ ಆಶ್ರಯದಲ್ಲಿ ಎಫ್.ಸಿ. ಎಕ್ಸ್‌ಪೋ -2026 ಜನವರಿ 9, 10 ಮತ್ತು 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಉದ್ಯಮಿ ಒಕ್ಕಲಿಗ ಪ್ರದರ್ಶನ-ಸಮ್ಮೇಳನ ಹಾಗೂ ನಾಲ್ಕನೇ ಬಾರಿಗೆ ಉದ್ಯಮಿ ಒಕ್ಕಲಿಗ ಜಿಲ್ಲಾ ಸಮ್ಮೇಳನಗಳು ನಡೆಯಿತು.


ಜ. 9ರಂದು ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಮಹಾಸ್ವಾಮೀಜಿ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ದೇಶದ ಜನರು ಸಂಘಟಿತರಾಗಬೇಕು. ಜೊತೆಗೆ ಮಾತೃಶಕ್ತಿ ಜಾಗೃತಗೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಪುರುಷನ ರೀತಿಯಲ್ಲಿಯೇ ಕೆಲಸ ಮಾಡುವಂತಾಗಬೇಕು. ಆಗ ದೇಶ ಉದ್ಧಾರವಾಗಲಿದೆ. ಸಮುದಾಯದ ಐಕ್ಯತೆ, ಸಾಮರಸ್ಯಕ್ಕೆ ತ್ಯಾಗದ ಮನೋಭಾವ ಬೇಕು. ಆಗ ಸಂಘಟನೆಗಳೂ ಬೆಳೆಯುತ್ತವೆ. ಸಮುದಾಯದ ಸಂಘಟನೆ, ಉದ್ಯಮ ದೃಷ್ಟಿಯಿಂದ ಇದೊಂದು ಅತ್ಯುತ್ತಮ ಕಾರ್ಯಕ್ರಮ ಆಗಿದೆ ಎಂದರು.


ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಮಾತನಾಡಿ, ಒಕ್ಕಲಿಗ ಸಮುದಾಯ ಹೆಚ್ಚು ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು. ಆದಿಚುಂಚನಗಿರಿ ಮಹಾಸ್ವಾಮೀಜಿಯವರು ಒಕ್ಕಲಿಗ ಸಮಾಜಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸಮಾಜ ಮಾದರಿಯಾಗಿ ಮುನ್ನಡೆಯಬೇಕು. ಕೃಷಿಯೂ ಲಾಭದಾಯಕವಾಗಿದೆ. ಕೃಷಿಗೆ ಒತ್ತುಕೊಟ್ಟು ನಮ್ಮ ಇಲಾಖೆ ಕೆಲಸ ಮಾಡುತ್ತಿದೆ ಎಂದರು.


ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಒಕ್ಕಲಿಗ ಸಮಾಜ ಶಕ್ತಿಯುತ ಸಮಾಜ. ಒಕ್ಕಲಿಗರಲ್ಲಿ ಹಿಂದೆ ಬಹಳ ದೊಡ್ಡ ಪ್ರಮಾಣದ ಜಮೀನು ಇತ್ತು. ಆದರೆ ಈಗ ನಾವು ಬಹಳ ಕಡಿಮೆ ಪ್ರಮಾಣದಲ್ಲಿ ಜಮೀನು ಇಟ್ಟುಕೊಂಡಿದ್ದೇವೆ. ದೇಶದಲ್ಲಿ ಶೇ.55ರಷ್ಟು ಉದ್ಯೋಗ ಕೊಡುವ ಕ್ಷೇತ್ರ ಕೃಷಿ. ನಂತರದ್ದು ಉದ್ಯಮ. 33 ಕೋಟಿ ಜನ ಉದ್ಯಮ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉದ್ಯಮ ಕ್ಷೇತ್ರ ಬೆಳೆಸುವಲ್ಲಿ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿವೆ ಎಂದರು.


ಮಾಜಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಆದಿಚುಂಚನಗಿರಿ ಮಠದ ಹಿಂದಿನ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿ, ಈಗಿನ ಶ್ರೀ ಡಾ| ನಿರ್ಮಲಾನಂದ ಮಹಾಸ್ವಾಮೀಜಿ, ಮಾಜಿ ಪ್ರಧಾನ ಮಂತ್ರಿ ದೇವೇಗೌಡರು ಹೊರರಾಜ್ಯ, ಹೊರದೇಶದಲ್ಲಿರುವ ಒಕ್ಕಲಿಗರನ್ನು ಗುರುತಿಸಿ ಒಟ್ಟು ಸೇರಿಸಿದ್ದಾರೆ. ಒಕ್ಕಲಿಗ ಸಮುದಾಯದ ಕೃಷಿಕರು ತಮ್ಮಲ್ಲಿನ ಕೃಷಿಯನ್ನು ಇತರೇ ಸಮುದಾಯವರಿಗೂ ಹಂಚುತ್ತಿದ್ದಾರೆ ಎಂದರು.


ಕಾರ್ಯಕ್ರಮದ ಮುಖ್ಯ ಮಾರ್ಗದರ್ಶಕರಾದ ಜಯರಾಮ ರಾಯಪುರ ಮಾತನಾಡಿ, ಸ್ವಾಮೀಜಿಯವರು ಆಶೀರ್ವಾದದಿಂದ ಪ್ರಾಮಾಣಿಕತೆ, ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದೇವೆ. ಉದ್ಯಮಿಗಳಿಗೆ ಪ್ರೋತ್ಸಾಹ ಸಿಗಬೇಕೆಂಬ ಮಹಾದಾಸೆ ಇಟ್ಟುಕೊಂಡು ಸಮ್ಮೇಳನ ಆಯೋಜಿಸಿದ್ದೇವೆ ಮುಂದಿನ ದಿನದಲ್ಲಿ ದಕ್ಷಿಣ ಕರ್ನಾಟಕದ ಪ್ರತಿ ತಾಲೂಕುಗಳಲ್ಲಿ ಎ-ಸಿ ಶಾಖೆ ಆರಂಭಿಸುತ್ತೇವೆ ಎಂದರು. ಮಾಜಿ ಸಚಿವ ಗೋಪಾಲಯ್ಯ, ಶರತ್ ಬಚ್ಚೇಗೌಡ, ಬಿ.ಎಲ್.ಶಂಕರ್, -ಸ್ಟ್ ಸರ್ಕಲ್‌ನ ಅಧ್ಯಕ್ಷ ಡಾ. ಡಿ.ಮುನಿರಾಜು, ಮದನ್ ಗೌಡ, ಡಾ.ಯು.ಪಿ.ಶಿವಾನಂದ ಸೇರಿದಂತೆ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಅನೇಕ ಗಣ್ಯರು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಮಳಿಗೆಗಳು ಭಾಗವಹಿಸಿದ್ದವು.

ಒಕ್ಕಲಿಗ ಉದ್ಯಮಿಗಳನ್ನು ಬೆಳೆಸುವ ನಿಟ್ಟಿನಲ್ಲಿ – ಸರ್ಕಲ್ ಸಂಸ್ಥೆ ಪ್ರಾಮಾಣಿಕತೆಯಿಂದ, ನಿಸ್ವಾರ್ಥದಿಂದ ಕೆಲಸ ಮಾಡುತ್ತಿದೆ. ನಾಲ್ಕು ವರ್ಷದ ಹಿಂದೆ ಆರಂಭವಾದ ಸಂಸ್ಥೆ ಕರ್ನಾಟಕದ ಎ ಜಿಗಳಲ್ಲೂ ಬಹಳ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ತಾಲೂಕುಗಳಲ್ಲಿ ಕೂಡ ಶಾಖೆ ಆರಂಭ ಮಾಡುವಂತೆ ಬೇಡಿಕೆ ಬಂದಿದೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಮಂಡ್ಯಗಳಲ್ಲಿ ಮಹಿಳಾ ಶಾಖೆ ಆರಂಭಿಸಲಿದ್ದೇವೆ.ಮುಂದಿನ ಒಂದು ಸಾಂಸ್ಕೃತಿಕ ರಚನೆಯ ಜೊತೆಗೆ ಇಡೀ ದಕ್ಷಿಣ ಕರ್ನಾಟಕದಲ್ಲಿ, ಎಲ್ಲ ಜಿಗಳಲ್ಲಿ, ಬಹುತೇಕ ಎ ತಾಲೂಕುಗಳಲ್ಲಿ ಎಫ್.ಸಿ. ಸಂಘಟನೆ ಶಾಖೆ ತೆರೆಯಲಿದ್ದೇವೆ ಎಂದು ಫೆಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗರ ಚೀಫ್ ಮೆಂಟರ್ ಜಯರಾಮ ರಾಯಪುರ್ ಹೇಳಿದರು. ಅವರು ಜ. 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಉದ್ಯಮಿ ಒಕ್ಕಲಿಗ ಎಫ್.ಸಿ. ಎಕ್ಸ್ಪೋ – 2026 ರಲ್ಲಿ ದ.ಕ. ಮತ್ತು ಕೊಡಗು ಜಿಲ್ಲಾ ಒಕ್ಕಲಿಗ ಉದ್ಯಮ ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.


ದ.ಕ. ಜಿಲ್ಲೆಯ 3 ತಾಲೂಕುಗಳಲ್ಲಿ ಮಾಧ್ಯಮ ಕ್ರಾಂತಿಯ ಮೂಲಕ ನಡೆದಾಡುವ ಮಾಹಿತಿ ಕೋಶವಾಗಿ ಡಾ. ಯು.ಪಿ.ಶಿವಾನಂದರು ಆ ಭಾಗವನ್ನು ಬೆಳೆಸಿದ್ದಾರೆ. ಸುಳ್ಯದಲ್ಲಿ ಡಾ. ಕುರುಂಜಿ ವೆಂಕಟ್ರಮಣ ಗೌಡರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರೆ, ಮಂಗಳೂರು ತನಕ ಅನೇಕ ಮಂದಿ ಉದ್ಯಮಿಗಳು ಕ್ರಿಯಾಶೀಲರಾಗಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಕ್ರಾಂತಿಯನ್ನು ಮಾಡಲು ಫಸ್ಟ್ ಸರ್ಕಲ್ ಕಾರ್ಯಪ್ರವೃತ್ತವಾಗಲಿದೆ ಎಂದರು.


ಫಸ್ಟ್ ಸರ್ಕಲ್ ಮೂಲಕ ದ.ಕ. ಜಿಲ್ಲೆಯನ್ನು ಉದ್ಯಮಶೀಲ ಜಿಲ್ಲೆಯನ್ನಾಗಿಸೋಣ : ಡಾ. ಯು.ಪಿ.ಶಿವಾನಂದ
ವಿಚಾರ ಸಂಕಿರಣದಲ್ಲಿ ಮಾತನಾಡಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ, ಉದ್ಯಮಿ ಒಕ್ಕಲಿಗ ದ.ಕ. ಜಿಲ್ಲೆಯ ಮೆಂಟರ್ ಆಗಿರುವ ಡಾ. ಯು.ಪಿ.ಶಿವಾನಂದರವರು ಸುಳ್ಯದಲ್ಲಿ ಡಾ. ಕುರುಂಜಿ ವೆಂಕಟ್ರಮಣ ಗೌಡರನ್ನು ಬಿಟ್ಟರೆ ಉಳಿದಂತೆ ಒಕ್ಕಲಿಗರು ಉದ್ಯಮ ಕ್ಷೇತ್ರದಲ್ಲಿ ಮುಂದೆ ಬರಲಿಲ್ಲ. ನಮ್ಮಲ್ಲಿ ಇರುವ ಭೂಮಿಯನ್ನು ಉಳಿಸಿಕೊಂಡು ಪ್ರವಾಸೋದ್ಯಮ, ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಸೇರಿದಂತೆ ಉದ್ಯಮಶೀಲತೆಯ ಅಭಿವೃದ್ಧಿಗಾಗಿ ನಾವು ಈಗಾಗಲೇ ಪುತ್ತೂರು, ಬೆಳ್ತಂಗಡಿ, ಸುಳ್ಯ, ಮಂಗಳೂರು ಭಾಗದಲ್ಲಿ ಕೃಷಿ ಅರಿವು ಕೇಂದ್ರವನ್ನು ಸ್ಥಾಪಿಸಿ ಅದರ ಮೂಲಕ ಆ ಭಾಗದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗುವಂತೆ ಮಾಡಿದ್ದೇವೆ. ಪ್ರಸ್ತುತ ಬೆಂಗಳೂರಿನಲ್ಲೂ ವಿಸ್ತರಿಸುತ್ತಿದ್ದೇವೆ. ನಮ್ಮೂರಿನ ಉತ್ಪನ್ನಗಳಿಗೆ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೇಡಿಕೆ ಬರುವಂತಾಗಬೇಕು ಎಂದರು.


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆಯವರು ಮಾತನಾಡಿ, ನಮ್ಮ ಯುವ ಉದ್ಯಮಿಗಳು ಪ್ರಾರಂಭದಲ್ಲಿ 6 ತಿಂಗಳ ಕಾಲ ಅಧ್ಯಯನ ಮಾಡಿ. ಅನೇಕ ಸಂಪನ್ಮೂಲಗಳು ಕರಾವಳಿ ಭಾಗದಲ್ಲಿದೆ. ಅನುಭವೀ ಉದ್ಯಮಿಗಳೂ ಇದ್ದಾರೆ. ಫಸ್ಟ್ ಸರ್ಕಲ್ ಮೂಲಕ ಉದ್ಯಮ ಶೀಲತೆ ಕರಾವಳಿ ಭಾಗದಲ್ಲಿ ವೃದ್ಧಿಯಾಗಲಿ ಎಂದರು.


ವೇದಿಕೆಯಲ್ಲಿ ಕೊಡಗು ದ.ಕ. ಗೌಡ ಸಂಘದ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ, ಕೊಡಗು ಗೌಡ ಸಮಾಜ ಬೆಂಗಳೂರು ಇದರ ನಿರ್ದೇಶಕ ಕೇಕಡ ನಾಣಯ್ಯ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಅತಿಥಿಗಳನ್ನು ಜಯರಾಮ ರಾಯಪುರ ಸನ್ಮಾನಿಸಿದರು. ಬಳಿಕ ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದ ಉದ್ಯಮಿಗಳಾದ ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ ಅಮೈ, ಡಾ. ವಿಷ್ಣುವರ್ಧನ ಕಾನತ್ತಿಲ, ಶಿವಪ್ರಸಾದ್ ಪಡ್ಡಂಬೈಲು, ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಕಡಮಾಜೆ ಮತ್ತು ನಿಧಿ ಫುಡ್ ಪ್ರಾಡಕ್ಟ್ ಮಾಲಕ ರಾಧಾಕೃಷ್ಣ ಇಟ್ಟಿಗುಂಡಿ, ಕೊಡಗಿನ ಕೇಕಡ ನಂದ, ಮಂದಿರ ತೇಜಸ್‌ರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕು.ಸಿಂಚನ ಊರುಬೈಲು ಸ್ವಾಗತಿಸಿದರು. ಶ್ರೀಮತಿ ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here