






ಪುತ್ತೂರು:ಹನುಮಗಿರಿ ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ 2026ರ ಎಪ್ರಿಲ್‌ನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಕಬಕ ಗ್ರಾಮದ ಭಕ್ತಾದಿಗಳ ಸಭೆ ಹಾಗೂ ಗ್ರಾಮ ಸಮಿತಿ ರಚನೆ ಶ್ರೀ ಮಹಾದೇವಿ ದೇವಸ್ಥಾನದ ಸಭಾಭವನದಲ್ಲಿ ಜ.7ರಂದು ನಡೆಸಿದರು.


ನಗರ ಗ್ರಾಮ ರಚನಾ ಸಮಿತಿಯ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ, ಉಪಾಧ್ಯಕ್ಷರಾದ ಶಶಿಕುಮಾರ್ ಬಾಲ್ಯೊಟ್ಟು, ಪ್ರಧಾನ ಕಾರ್ಯದರ್ಶಿ ಆರ್ ಸಿ ನಾರಾಯಣ್, ನಹುಷ, ಹಾಗೂ ಗ್ರಾಮದ ಭಕ್ತರ ಸಮ್ಮುಖದಲ್ಲಿ ಸಮಿತಿ ರಚಿಸಿದರು.



ಕಬಕ ಗ್ರಾಮ ಸಮಿತಿ ಅಧ್ಯಕ್ಷರಾಗಿ ಜಯರಾಮ ನೆಕ್ಕರೆ, ಪ್ರಧಾನ ಕಾರ್ಯದರ್ಶಿಯಾಗಿ ವಸಂತ ನೆಕ್ಕರಾಜೆ,ಜಪ ಯಜ್ಞ ಸಮಿತಿ ಗ್ರಾಮ ಸಂಚಾಲಕರಾಗಿ ಜತ್ತಪ್ಪ ಗೌಡ ಅಡ್ಯಾಲು,ಸಹ ಸಂಚಾಲಕರಾಗಿ ನಿತಿನ್ ವಿದ್ಯಾಪುರ,ವಸಂತ್ ದೇವಸ್ಯ,ನಾಗೇಶ್ ಪದೆಂಜಾರು,ವಿನಯ್ ಕಲ್ಲೇಗ ರಥಯಾತ್ರೆ ಗ್ರಾಮ ಸಂಚಾಲಕರಾಗಿ ಲೋಕೇಶ್ ಬಾಕಿಮಾರು,ಸಹ ಸಂಚಾಲಕರಾಗಿ ರಾಜ ವಿದ್ಯಾಪುರ,ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾಗಿ ಪ್ರಕಾಶ್ ಭಟ್ ವಡ್ಯ, ಸಹ ಸಂಚಾಲಕರಾಗಿ ಈಶ್ವರ ಪುಳಿತ್ತಡಿ,ಜಯಪ್ರಕಾಶ್ ಆಲದಗುಂಡಿ,ರಾಜೇಶ್ ಮುರ,ಪ್ರಸಾದ್ ಮೂವಲ,ಭಜನಾ ಸಂಕೀರ್ತನಾ ಗ್ರಾಮ ಸಂಚಾಲಕರಾಗಿ ಧರ್ನಪ್ಪ ಸೀಗೆತ್ತಡಿ,ಸಹ ಸಂಚಾಲಕರಾಗಿ ಪ್ರಶಾಂತ್ ಮೂವಲ,,ಸುಜಾತ ನೆಕ್ಕರೆ,ಲತಾ ಕಬಕ,ಪದ್ಮಾವತಿ ಸುರುಳಿಮೂಲೆ ,ಮಹಿಳಾ ಸಮಿತಿ ಗ್ರಾಮ ಸಂಚಾಲಕಿಯಾಗಿ ಭಾನುಮತಿ ವಿದ್ಯಾಪುರ, ಸಹ ಸಂಚಾಲಕಿಯಾಗಿ ರೇಷ್ಮ ನೆಕ್ಕರೆ,ಸೌಮ್ಯ ಬನ,ಗೀತಾ ಕಳಮೆಮಜಲು,ವಾಣಿ ನೆಕ್ಕರೆ,ಪೂರ್ಣಿಮಾ ಮೂವಲ,ನಳಿನಿ ಹೊಸಮನೆ,ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಯತೀಶ್ ಪದ್ನಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಯರಾಮ್, ಜತ್ತಪ್ಪ ಗೌಡ, ವಸಂತ್, ಅಭಿಜಿತ್ ಕೊಡಿಪಾಡಿ, ಜನಾರ್ದನ, ಜಯಂತ್, ಯತೀಶ, ಗಣೇಶ, ರಮೇಶ, ಪ್ರಶಾಂತ್, ರಕ್ಷಿತ್, ಈಶ್ವರ, ರಾಜ ವಿದ್ಯಾಪುರ, ಗಣೇಶ ಪದಡ್ಕ, ಪುರುಷೋತ್ತಮ, ಪ್ರಶಾಂತ, ಲೋಕೇಶ್, ಅಜಯ್, ಧರ್ಮಪ್ಪ, ಮನು ಮತ್ತು ಇತರರು ಉಪಸ್ಥಿತರಿದ್ದರು.










