ಪ್ರಗತಿಪರ ಕೃಷಿಕ ನೇಮಣ್ಣ ಗೌಡ ಉರ್ಮಾನು ನಿಧನ

0

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಮಾದೇರಿ ಉರ್ಮಾನು ನಿವಾಸಿ, ಪ್ರಗತಿಪರ ಕೃಷಿಕ ನೇಮಣ್ಣ ಗೌಡ(69ವ.)ರವರು ಜ.13ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.


ನೇಮಣ್ಣ ಗೌಡ ಅವರು ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿಂದೆ ಅವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಪುಚ್ಚೇರಿ ಸರಕಾರಿ ಶಾಲೆಯ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಶಾಲಾ ದಿನಗಳಲ್ಲಿ ಕಬಡ್ಡಿ ಆಟಗಾರರಾಗಿದ್ದ ನೇಮಣ್ಣ ಗೌಡ ಅವರು ಸ್ಥಳೀಯವಾಗಿ ನಡೆಯುತ್ತಿದ್ದ ನಾಟಕ, ಕ್ರೀಡಾಕೂಟ, ಕಂಬಳಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು.

ಮೃತರು ಪತ್ನಿ ಹೇಮಲತಾ, ಪುತ್ರ ಸಂತೋಷ್, ಪುತ್ರಿಯರಾದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್., ದಯಾಕುಮಾರಿ, ಲೋಕೇಶ್ವರಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here