






ಪುತ್ತೂರು: ಕಳೆದ ಡಿ.31 ರಂದು ರಾತ್ರಿ ವಿಟ್ಲದಲ್ಲಿ ವಿದ್ಯುತ್ ಅಘಡದಿಂದ ಬೆಂಕಿ ಕಾಣಿಸಿಕೊಂಡು ಅಂಗಡಿ ಸುಟ್ಟುಹೋದ ಘಟನೆ ನಡೆದಿದ್ದು , ಘಟನೆಯಿಂದ ವ್ಯಕ್ತಿಯೋರ್ವರಿಗೆ ಸೇರಿದ ಇಲೆಕ್ಟ್ರಿಕಲ್ ಅಂಗಡಿ ಬೆಂಕಿಗಾಹುತಿಯಾಗಿ ಸುಮಾರು 80 ಲಕ್ಷ ನಷ್ಟ ಸಂಭವಿಸಿತ್ತು. ಅಂಗಡಿ ಕಳೆದುಕೊಂಡ ಮಾಲಕಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಲಕ್ಷ ಪರಿಹಾರ ಧನ ಮಂಜೂರು ಮಾಡಿದ್ದಾರೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದ ಮಂಕುಡೆ ಶಾಲಾ ಬಳಿ ಕುಡ್ತಮುಗೇರು ಕೊಳ್ಳಾಡು ಶಿವರಾಮ ಬಿ. ಇವರ ಶ್ರೀ ಇಲೆಕ್ಟ್ರಿಕಲ್ ಅಂಗಡಿಯು ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಸಂಪೂರ್ಣ ಬೆಂಕಿಗಾಹುತಿಯಾಗಿ ಅಪಾರ ನಷ್ಟ ಉಂಟಾಗಿದ್ದು ಸರಕಾರದಿಂದ ಪರಿಹಾರ ಒದಗಿಸುವ ಬಗ್ಗೆ ಶಿವರಾಮರವರು ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿಕೊಂಡಿದ್ದರು. ಘಟನಾ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲನೆಯನ್ನು ಮಾಡಿದ್ದರು.



25 ವರ್ಷಗಳಿಂದ ಶ್ರೀ ಇಲೆಕ್ಟ್ರಿಕಲ್ ಅಂಗಡಿಯು ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಸಂಪೂರ್ಣ ಬೆಂಕಿಗಾಹುತಿಯಾಗಿ ಸುಮಾರು ರೂ.80.೦೦ ಲಕ್ಷ ರೂ ನಷ್ಟ ಉಂಟಾಗಿದ್ದು, ಆದ್ದರಿಂದ ಸದರಿ ಕುಟುಂಬಕ್ಕೆ ಮಾನ್ಯ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 80.೦೦ ಲಕ್ಷ ಅನುದಾನ ಮಂಜೂರು ಮಾಡುವಂತೆ ಶಾಸಕರು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. ಸರಕಾರ 5 ಲಕ್ಷ ಪರಿಹಾರ ಧನ ಮಂಜೂರು ಮಾಡಿದೆ.
ಶಿವರಾಮ ಅವರಿಗೆ ಸಏರಿದ ಇಲೆಕ್ಟ್ರಿಕಲ್ ಅಂಗಡಿ ವಿದ್ಯುತ್ ಅವಘಢದಿಂದ ಸುಟ್ಟು ಭಸ್ಮವಾಗಿತ್ತು. ಡಿ.31 ರಂದು ರಾತ್ರಿ ಈ ಘಟನೆ ನಡೆದಿತ್ತು. ಘಟನೆಯಿಂದ 85 ಲಕ್ಷಕ್ಕೂ ಮಿಕ್ಕಿ ಉಪಕರಣಗಳು ಸುಟ್ಟು ಭಸ್ಮವಾಗಿತ್ತು. 25 ವರ್ಷಗಳಿಂದ ಅವರು ಅಂಗಡಿ ನಡೆಸಿಕೊಂಡು ಬಂದಿದ್ದರು. ಎಲ್ಲವನ್ನೂ ಕಳೆದುಕೊಂಡು ಅವರು ಕಂಗಾಲಾಗಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದೆ. ಪರಿಹಾರ ಒದಗಿಸುವ ಬಗ್ಗೆ ಮನವಿ ಮಾಡಿದ್ದರು, ಅದಕ್ಕೆ ಭರವಸೆಯನ್ನು ನೀಡಿದ್ದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ, ಮುಖ್ಯಮಂತ್ರಿಗಳು 5 ಲಕ್ಷ ಪರಿಹಾರವನ್ನು ಘೋಷಣೆ ಮಾಡುವ ಮೂಲಕ ಕುಟುಂಬಕ್ಕೆ ಸಾಂತ್ವನ ನೀಡಲಾಗಿದೆ.
ಅಶೋಕ್ ರೈ, ಶಾಸಕರು ಪುತ್ತೂರು










