






ಪುತ್ತೂರು: ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ MEIF ಹಾಗೂ ಯೆನೆಪೋಯ ಕಾಲೇಜಿನ ಸಹಭಾಗಿತ್ವದೊಂದಿಗೆ ನಡೆಯುವ ಉಚಿತ NEET/CET ಕ್ರ್ಯಾಶ್ ಕೋರ್ಸ್ಗಳ ಕುರಿತು ಮಾಹಿತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಸಂಪನ್ಮೂಲ ವ್ಯಕ್ತಿ ಯೆನೆಪೋಯ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥ ಹಾಗೂ ನಿರ್ದೇಶಕ YCAL Bahrain(yenapoya center for advanced learning) ಸಿನಾನ್ ಝಕರಿಯ ಪ್ರಥಮ ಮತ್ತು ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ NEET/CET ಇದರ ಬಗ್ಗೆ ಸಮಗ್ರ ವಾದ ಮಾಹಿತಿಯನ್ನು ನೀಡುವುದರ ಜೊತೆಗೆ MEIF ಹಾಗೂ ಯೆನೆಪೋಯ ಕಾಲೇಜಿನ ಸಹಭಾಗಿತ್ವದೊಂದಿಗೆ ಉಚಿತ NEET/CET ಕ್ರ್ಯಾಶ್ ಕೋರ್ಸ್ ಹಾಗೂ ಅದರ ಉಚಿತ ಸೀಟ್ ಹಂಚಿಕೆಯ ಬಗ್ಗೆ ಮಾಹಿತಿ ನೀಡಿದರು.




ವಿದ್ಯಾರ್ಥಿನಿಯರು NEET/CET ಕೋರ್ಸುಗಳ ಬಗ್ಗೆ ತಮಗಿರುವ ಗೊಂದಲವನ್ನು ಚರ್ಚಿಸಿ ಪರಿಹಾರವನ್ನು ಪಡೆದುಕೊಂಡರು. ಅನುಗ್ರಹ ಮಹಿಳಾ ಕಾಲೇಜಿನ ಖಜಾಂಜಿ
ಹೈದರ್ ಅಲಿ , ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತ ಬಿ. ಡಿ, ಹಾಗೂ ಬೋಧಕ-ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರಥಮ PCMB ಯ ನುಹಾ ಮರ್ಯಮ್ ಕಿರಾಅತ್ ನಡೆಸಿದರು.
ವಿಜ್ಞಾನ ವಿಭಾಗದ ಉಪನ್ಯಾಸಕಿ ಕವಿತಾ ಕುಮಾರಿ ಕೆ. ಯವರು ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.










