ಪುತ್ತೂರು ದರ್ಬೆಯ ಹನುಮಾನ್‌ವಾಡಿ ಪಿ.ಸಿ. ಪೈ ಕಂಪೌಂಡ್ ನಲ್ಲಿ 3ನೇ ವರ್ಷದ ಶ್ರೀ ರಾಮೋತ್ಸವ

0

ಪುತ್ತೂರು: ದರ್ಬೆಯ ಹನುಮಾನ್‌ವಾಡಿ ಪಿ.ಸಿ. ಪೈ ಕಂಪೌಂಡ್ ನ ಕೆ. ಹರಿಶ್ಚಂದ್ರ ಆಚಾರ್ಯ ಹಾಗೂ ಬಾಬು ಕಾಮತ್‌ರವರ ನೇತೃತ್ವದಲ್ಲಿ ವೆ.ಮು. ಶ್ರೀ ವೆಂಕಟೇಶ್ ಭಟ್‌ರವರ ಪೌರೋಹಿತ್ಯದಲ್ಲಿ 3ನೇ ವರ್ಷದ ಶ್ರೀ ಬಾಲರಾಮ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಸ್ಥಳಿಯ ನಿವಾಸಿಗಳ ಸಹ ಭಾಗಿತ್ವದಲ್ಲಿ ಜ.22 ಶ್ರೀ ರಾಮೋತ್ಸವ ಕಾರ್ಯಕ್ರಮ ನಡೆಯಿತು.


ಪುತ್ತೂರು ಬೊಳುವಾರು ವಿಶ್ವಕರ್ಮ ಮಹಿಳಾ ಮಂಡಲದ ಸದಸ್ಯರು ಹಾಗೂ ಸ್ಥಳೀಯ ಮಾತೆಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಸುಮಾರು 80ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶ್ರೀ ರಾಮನ ಬಗ್ಗೆ ಉಪನ್ಯಾಸವನ್ನು ಶ್ರೀ ವೆ.ಮೂ. ವೆಂಕಟೇಶ್ ಭಟ್‌ರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಉಪಹಾರದ ವ್ಯವಸ್ಥೆಯನ್ನು ಕೆ. ಹರಿಶ್ಚಂದ್ರ ಆಚಾರ್ಯ ಮನೆಯವರು ಹಾಗೂ ಬಾಬು ಕಾಮತ್ ಮನೆಯವರು ನೀಡಿ ಸತ್ಕರಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಕೆ.ಶಶಾಂಕ್.ಎಚ್ ಆಚಾರ್ಯ ಹಾಗೂ ಶಮಂತ್ ಎಚ್ ಆಚಾರ್ಯ ಹಾಗೂ ಸ್ಥಳಿಯ ತರುಣರು ಸಹಕರಿಸಿದರು.

LEAVE A REPLY

Please enter your comment!
Please enter your name here