






ಪುತ್ತೂರು: ನಮ್ಮೂರು ನಮ್ಮವರು ಮೈಂದಡ್ಕ(ರಿ) ಸಂಘಟನೆಯ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ಮೈಂದಡ್ಕ ಮೈದಾನದಲ್ಲಿ ನಡೆಯಿತು.



ಉಪ್ಪಿನಂಗಡಿಯ ಶ್ರೀ ನಿಧಿ ಮೊಬೈಲ್ಸ್ ಮಾಲಕ ಜಯಪ್ರಕಾಶ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಮೈಂದಡ್ಕ ಅಂಗನವಾಡಿ ಕಾರ್ಯರ್ತೆ ದೇವಕಿ, ಸಂಘಟನೆಯ ಅಧ್ಯಕ್ಷ ಪುರುಷೋತ್ತಮ ನಾಯ್ಕ , ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.



ನೆಕ್ಕಿಲಾಡಿ ಸ.ಹಿ.ಪ್ರಾ. ಶಾಲೆಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಘಟನೆಯ ವಿಂಶತಿ ವರ್ಷಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಲಘು ಉಪಾಹಾರದ ವ್ಯವಸ್ಥೆಯನ್ನು ಮಾಡಲಾಯಿತು.










