







ಕಡಬ: ತಾಲೂಕು ಕೌಕ್ರಾಡಿ ಗ್ರಾಮದ ಕಾಂತುಪಳಿಕೆ ಪದ್ಮಯ್ಯ ಗೌಡರ ಪತ್ನಿ ಕೆ.ಪಿ.ಸುಗಂಧಿ (65ವ.) ಅವರು ಜ.25ರಂದು ನಿಧನರಾದರು.


ಕೆ.ಪಿ.ಸುಗಂಧಿ ಅವರಿಗೆ ಜ.25ರಂದು ಬೆಳಿಗ್ಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಮನೆಯವರು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು ಎಂದು ವರದಿಯಾಗಿದೆ.



ಮೃತರು ಪತಿ ಪದ್ಮಯ್ಯ ಗೌಡರವರನ್ನು ಅಗಲಿದ್ದಾರೆ.










