ಜ.29-ಫೆ.2; ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

0

ಜ.29-ಧ್ವಜಾರೋಹಣ, ಉತ್ಸವ ಆರಂಭ
ಜ.30-ಹಸಿರುವಾಣಿ ಸಮರ್ಪಣೆ, ಕಟ್ಟೆಪೂಜೆ
ಜ.31-ದರ್ಶನ ಬಲಿ, ಶ್ರೀರಾಮ ಸಂದರ್ಶನೋತ್ಸವ
ಫೆ.1-ಮಹಾರಥೋತ್ಸವ
ಫೆ.2-ಅವಭೃತ, ಧ್ವಜಾವರೋಹಣ
ಫೆ.3, 4-ದೈವಗಳ ನೇಮ

ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜ.29ರಿಂದ ಫೆ.2ರ ತನಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಈರಕೀಮಠ ನರಹರಿ ಉಪಾಧ್ಯಾಯರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಹಾಗೂ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.


ಜ.29ರಂದು ರಾತ್ರಿ 7-೦೦ರಿಂದ ಧ್ವಜಾರೋಹಣ, ಬಲಿ ಹೊರಟು ಉತ್ಸವ ನಡೆಯಲಿದೆ. ಜ.30ರಂದು ಬೆಳಿಗ್ಗೆ 10.೦೦ರಿಂದ ಹಸಿರುವಾಣಿ ಸಮರ್ಪಣೆ, 10.30ರಿಂದ ಬಲಿ ಹೊರಟು ಉತ್ಸವ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಂಜೆ 6.30ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಕೆರೆಕರೆ, ಈರಕೀಮಠ, ಸಂಪ್ಯಾಡಿಕಟ್ಟೆ, ಶಾರದಾಂಬಾ ಕಟ್ಟೆ, ಕೆದಿಲ ಕಟ್ಟೆಗಳ ಸಹಿತ ಈ ದಾರಿಯ ಎಲ್ಲಾ ಕಟ್ಟೆಗಳಲ್ಲಿ ಶ್ರೀ ದೇವರಿಗೆ ಕಟ್ಟೆಪೂಜೆ ನಡೆಯಲಿದೆ. ಜ.31ರಂದು ಬೆಳಿಗ್ಗೆ 8.೦೦ಕ್ಕೆ ನಂದಾದೀಪೋತ್ಸವ, 9ರಿಂದ ಉತ್ಸವ ಆರಂಭ, ಮಧ್ಯಾಹ್ನ 11ಕ್ಕೆ ದರ್ಶನ ಬಲಿ ನಂತರ ಬಟ್ಟಲುಕಾಣಿಕೆ, ಮಹಾಪೂಜೆ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಬಲಿ ಹೊರಡುವುದು, ದಂಡತೀರ್ಥ ಕೆರೆ ಉತ್ಸವ, ದೇವರಗುಡ್ಡೆ, ತಾವೂರು ದಾರಿಯ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆದು ಶ್ರೀರಾಮ ಸಂದರ್ಶನೋತ್ಸವ, ಶಾಲಾ ಕಾಲೇಜು ಬಳಿಯ ಕಟ್ಟೆಪೂಜೆಗಳು, ದೈವಗಳ ಭಂಡಾರ ಹಿಡಿಯುವುದು, ವಸಂತ ಕಟ್ಟೆ ಉತ್ಸವ ನಡೆಯಲಿದೆ. ಫೆ.1ರಂದು ಬೆಳಿಗ್ಗೆ 9.30ರಿಂದ ಬಲಿ ಹೊರಟು ಉತ್ಸವ, 10.30ರಿಂದ 48 ತೆಂಗಿನಕಾಯಿಗಳ ಶ್ರೀ ಗಣಪತಿ ಹೋಮ ನಡಯಲಿದೆ. ರಾತ್ರಿ 8ರಿಂದ ಬಲಿ ಹೊರಟು ಉತ್ಸವ, ರಾತ್ರಿ 9.30ರಿಂದ ಬ್ರಹ್ಮರಥೋತ್ಸವ, ಶ್ರೀ ಭೂತಬಲಿ, ಶಯನೋತ್ಸವ ನಡೆಯಲಿದೆ. ಫೆ.2ರಂದು ಬೆಳಿಗ್ಗೆ 7.30ರಿಂದ ಕವಾಟೋದ್ಘಾಟನೆ, ಅಭಿಷೇಕ ನಡೆಯಲಿದೆ. ಸಂಜೆ 5ರಿಂದ ಅವಭೃತ ಸವಾರಿ, ರಾಮಕುಂಜದಿಂದ ಆತೂರು, ಕೆ.ಸಿ.ಫಾರ್ಮ್, ಕೊಯಿಲ ದೇವಸ್ಥಾನ, ಹೊಳೆ ಬದಿಯವರೆಗಿನ ಎಲ್ಲಾ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆದು ಅವಭೃತ ನಡೆಯಲಿದೆ. ರಾತ್ರಿ 11ರಿಂದ ಧ್ವಜಾವರೋಹಣ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ.

ಫೆ.3, 4; ದೈವಗಳ ನೇಮ;
ಫೆ.3ರಂದು ಬೆಳಿಗ್ಗೆ 9ರಿಂದ ಸಂಪ್ರೋಕ್ಷಣೆ, ನಾಗಾರಾಧನೆ ನಡೆಯಲಿದೆ. ರಾತ್ರಿ 8.30ರಿಂದ ಕಲೆಂಬಿತ್ತಾಯ, ಕಲ್ಲುರ್ಟಿ, ಅಂಗಣ ಪಂಜುರ್ಲಿ ದೈವಗಳ ನೇಮ ನಡೆಯಲಿದೆ. ಫೆ.೪ರಂದು ಬೆಳಿಗ್ಗೆ 8.30ರಿಂದ ಶ್ರೀ ಶಿರಾಡಿ, ರುದ್ರಚಾಮುಂಡಿ, ಕಲೆಂಬಿತ್ತಾಯ, ಗಿಳಿರಾಮ, ಗುಳಿಗ ದೈವಗಳ ನೇಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ;
ಜ.31ರಂದು ರಾತ್ರಿ 9.30ರಿಂದ ಶ್ರೀ ರಾಮಕುಂಜೇಶ್ವರ ಮಿತ್ರವೃಂದ ರಥಬೀದಿ, ರಾಮಕುಂಜ ಇವರ ಆಶ್ರಯದಲ್ಲಿ 34ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶಾರದಾ ಆರ್ಟ್ಸ್ ಕಲಾವಿದರು, ಮಂಜೇಶ್ವರ ಅಭಿನಯಿಸುವ ’ಕಥೆ ಎಡ್ಡೆಂಡು’ ನಡೆಯಲಿದೆ. ಫೆ.1ರಂದು ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ’ಬನತ ಬೆಮ್ಮೆರ್’ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here