ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ರವರಿಂದ ಕಳಾರ ಸರಕಾರಿ ಶಾಲಾ ಎಲ್ ಕೆ. ಜಿ. ಮತ್ತು ಯು.ಕೆ.ಜಿ ಕೊಠಡಿ ಉದ್ಘಾಟನೆ

0

ಕಡಬ: ಕಳಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ. ಮತ್ತು ಯು.ಕೆ.ಜಿ) ಸ್ಮಾರ್ಟ್ (ತಂತ್ರಜ್ಞಾನ ಆಧಾರಿತ) ತರಗತಿ ಉದ್ಘಾಟನಾ ಸಮಾರಂಭವು ಜರಗಿತು.

ನೂತನ ಕೊಠಡಿಯನ್ನು ಪದ್ಮಶ್ರೀ ಪುರಸ್ಕೃತ ಹರೆಕಳ ಹಾಜಬ್ಬನವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಎಚ್.ಹಂಝ ಕಳಾರ ವಹಿಸಿದರು. ಸಭಾ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಕೆ.ಎಂ ಉದ್ಘಾಟಿಸಿದರು.

ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೆಕಳ ಹಾಜಬ್ಬ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿದ ಪದ್ಮಶ್ರೀ ಪುರಸ್ಕೃತ ಹಾಜಬ್ಬನವರು ಮಾತನಾಡಿ, ಎಸ್.ಡಿ.ಎಂ.ಸಿ ಸಮಿತಿಯ ಮೂಲಕ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಾರಂಭವಾಗಿರುವ ಪೂರ್ವ ಪ್ರಾಥಮಿಕ ತರಗತಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸಮಸ್ತ ಗ್ರಾಮಸ್ಥರು ಹಾಗೂ ಎಲ್ಲ ಜನಪ್ರತಿನಿಧಿನಗಳು ಸರಕಾರಿ ಶಾಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರ ಮೂಲಕ ಕಳಾರ ಶಾಲೆಯ ಈ ಪೂರ್ವ ಪ್ರಾಥಮಿಕ ತರಗತಿಗಳನ್ನು ಬೆಂಬಲಿಸುವುದರ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ತಮ್ಮಿಂದ ಆಗಬೇಕು ಎಂದು ಹೇಳಿದರು.

ಸಾಮಾನ್ಯ ತರಗತಿಯನ್ನು ಸುಂದರ ಹಸ್ತಾಕ್ಷರದ ಮೂಲಕ ಸ್ಮಾರ್ಟ್ ತರಗತಿಯಾಗಿ ಪರಿವರ್ತಿಸಿದ ಅನಿಲ್ ಕೆ. ವಿ ಇವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ  ಸೈಮನ್ ಸಿ ಕೆ,  ಅಕ್ಷತಾ,  ರೋಹಿತ್ ಗೌಡ, ದಯಾನಂದ ಪಿಜಕಳ, ಫೈಝಲ್ ಎಸ್.ಇ.ಎಸ್,  ಮೋಹನ್, ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಹಾಜಿ ಸೈಯದ್‌ ಮೀರಾ ಸಾಹೇಬ್‌, ಸ್ಥಳೀಯ ಮೊಹಮ್ಮದಿಯಾ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ಸಮದ್ ಬಾಕವಿ, ಕಳಾರ ಜಮಾತ್ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಹಾಜಿ, ಕೆಡಿಪಿ ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಮಾಜಿ ಸದಸ್ಯರಾದ ಶಾಲಿನಿ ಸತೀಶ್ ನಾಯ್ಕ್, ಮೇಲಿನ ಮನೆ ಸತೀಶ್ ನಾಯ್ಕ್, ಕಡಬ ಗಸ್ತು ಅರಣ್ಯ ಅಧಿಕಾರಿಯಾದ ಚಿದಾನಂದ.ಬಿ, ರಾಘವೇಂದ್ರ ಮತ್ತು ಶುಶಾಂತ್ ಆಚಾರ್ಯ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡ್ಡಗದ್ದೆ ಒಕ್ಕೂಟದ ಸೇವಾಪ್ರತಿನಿಧಿಯಾದ   ನಳಿನಿ, ಸವಿತಾ, ಹಿರಿಯರಾದ ಯೂಸುಫ್ ಕಳಾರ, ಅಬ್ಬಾಸ್ ಹಾಜಿ ಕಳಾರ ಉಪಸ್ಥಿತರಿದ್ದರು.

ಸಾಮಾಜಿಕ ಕಾರ್ಯಕರ್ತರಾದ ಮೊಹಮ್ಮದ್ ಅಲಿ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರುಗಳಾದ, ರಮ್ಲ ಸನ್ ರೈಸ್, ಇಸ್ಮಾಯಿಲ್ ಬಿಡಿಎಸ್, ಇಸ್ಮಾಯಿಲ್ ಕೆ ಎಚ್ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಸಂಶೀರಾ ಬಾನು, ಸದಸ್ಯರಾದ ಹಾರಿಸ್ ಕಳಾರ, ಜಬ್ಬರ್ ಕಳಾರ, ಶರೀಫ್ ಬಿಡಿಎಸ್ ಸಾಜಿದ ಕಳಾರ ಸೇರಿದಂತೆ ಸರ್ವ ಸದಸ್ಯರು ಹಾಗೂ ಪೋಷಕರು, ಪೂರ್ವ ವಿದ್ಯಾರ್ಥಿ ಸಂಘದ ನಾಯಕರಾದ ಇಕ್ಬಾಲ್ ಐ.ಎ.ಎಸ್.‌ ಸೇರಿದಂತೆ ಸರ್ವ ಸದಸ್ಯರು, ವಿದ್ಯಾಭಿಮಾನಿಗಳು, ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು. ಈ ಸಂದರ್ಭದಲ್ಲಿ ಹಲವು ಗಣ್ಯರನ್ನು ನೆನಪಿನ ಕಾಣಿಕೆಯ ಮೂಲಕ ಗೌರವಿಸಲಾಯಿತು. ಅತಿಥಿ ಶಿಕ್ಷಕಿಯರಾದ  ಆಬಿದ, ನವ್ಯಶ್ರೀ ಜಯಶ್ರೀ ಇವರುಗಳು ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಭಾರ ಮುಖ್ಯ ಶಿಕ್ಷಕ ಹಾಲೇಶ್ ನಾಯ್ಕ್. ಜಿ  ಸ್ವಾಗತಿಸಿ, ಅಶ್ವಿನಿ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here