ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

0

ಬೆಟ್ಟಂಪಾಡಿ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾಲೆತ್ತೋಡಿ ಇಲ್ಲಿ ನಡೆಯುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಜ.30ರಂದು ರಂದು ನಡೆಯಿತು.


ವಿಶೇಷ ಶಿಬಿರದ ಉದ್ಘಾಟನೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪಿ.ಜಿ.ಶಂಕರನಾರಾಯಣ ಭಟ್ ನೆರವೇರಿಸಿ ಸ್ವಯಂಸೇವಕರಿಗೆ ಇಂತಹ ವಿಶೇಷ ಶಿಬಿರದ ಮಹತ್ವ ಹಾಗೂ ಅದರಿಂದ ಭವಿಷ್ಯದಲ್ಲಾಗುವ ಪ್ರಯೋಜನವನ್ನು ತಿಳಿಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ನಿವೃತ್ತ ಶಿಕ್ಷಕ ಮಂಜುಳಗಿರಿ ವೆಂಕಟರಮಣ ಭಟ್ ಭಾಗವಹಿಸಿ ಮಾತನಾಡಿ ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು.

ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ನಾಗವೇಣಿ ಕೆ ಹಾಗೂ ಶ್ರೀ ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ ಇದರ ಸಂಚಾಲಕ ಶಿವರಾಮ ಭಟ್ ಜೀರ್ಣಕಜೆ ಹಾಗೂ ಕಾವು ಕ್ಲಸ್ಟರ್ ಇದರ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಸಾದ್ ಕೆ.ವಿ.ಎಲ್.ಎನ್ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಪ್ರಾಂಶುಪಾಲ ಪ್ರೊ. ದಾಮೋದರ ಕಣಜಾಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಲೆತೋಡಿ ಇದರ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಜಯಪ್ರಶಾಂತ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರುಷೋತ್ತಮ ಎಂ, ಮುಖ್ಯೋಪಾಧ್ಯಾಯ ತಿಮ್ಮಪ್ಪ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸುಬ್ರಮಣ್ಯ ಕೆ ಹಾಗೂ ಗ್ರಂಥ ಪಾಲಕ ಶ್ರೀ ರಾಮ ಕೆ, ಗ್ರಂಥಾಲಯ ಸಹಾಯಕಿ ಸ್ವಾತಿ, ಲೈಬ್ರರಿ ಟ್ರೈನೀ ಧನ್ಯಶ್ರೀ ಉಪಸ್ಥಿತರಿದ್ದರು.


ಸ್ವಯಂಸೇವಕಿಯರಾದ ವೀಕ್ಷಿತಾ ಜಿ, ಚೈತ್ರ, ಸುಚಿತ, ಮಮತಾ, ದೀಕ್ಷಿತ ಹಾಗೂ ಅಂಕಿತ ಪ್ರಾರ್ಥಿಸಿದರು. ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಪ್ರೊ. ಉದಯಶಂಕರ ಪ್ರಾಸ್ತಾವಿಸಿ ಸ್ವಾಗತಿಸಿದರು, ಯೋಜನಾಧಿಕಾರಿ ಡಾ. ಲಾಯ್ಡ್ ವಿಕ್ಕಿ ಡಿಸೋಜಾ ವಂದಿಸಿದರು, ಘಟಕ ನಾಯಕ ತನುಷ್ ನಿರೂಪಿಸಿದರು.

ಜ.30ರಿಂದ ಫೆ.5ರ ವರೆಗೆ ಒಟ್ಟು ಏಳು ದಿನಗಳು ಈ ವಾರ್ಷಿಕ ವಿಶೇಷ ಶಿಬಿರವು ಶ್ರಮದಾನ, ಶೈಕ್ಷಣಿಕ ತರಬೇತಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇತರ ಚಟುವಟಿಕೆಗಳು ಶಾಲಾಭಿವೃದ್ಧಿ ಸಮಿತಿ, ವಿದ್ಯಾರ್ಥಿಗಳು, ಪೋಷಕ ವೃಂದ, ಶಾಲಾ ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯಲಿದೆ ಎಂಬುದಾಗಿ ಯೋಜನಾಧಿಕಾರಿಗಳು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here