ಸ್ಟೀಲ್ ಫ್ಯಾಬ್ರಿಕೇಶನ್ ಅಸೋಸಿಯೇಷನ್ ತ್ರೈಮಾಸಿಕ ಸಭೆ

0

ಪುತ್ತೂರು: ಸ್ಟೀಲ್ ಫ್ಯಾಬ್ರಿಕೇಷನ್ ಅಸೋಸಿಯೇಷನ್ ರಿ ಪುತ್ತೂರು ಇದರ ತ್ರೈಮಾಸಿಕ ಸಭೆಯು ಜ.28ರಂದು ದರ್ಬೆ ಬೈಪಾಸ್ ಬಳಿಯ ಹೋಟೆಲ್ ಅಶ್ವಿನಿ ಇದರ ಸಭಾಂಗಣದಲ್ಲಿ ನಡೆಯಿತು.


ಪುತ್ತೂರು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಶಿವಶಂಕರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ , ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ , ಶುಭ ಹಾರೈಸಿದರು.
ಜಿಂದಲ್ ಸ್ಟೀಲ್ ನ ಮಾರ್ಕೆಟಿಂಗ್ ವಿಭಾಗದ ಎ.ಜಿ.ಎಂ ಹರೀಶ್ ,ಲಕ್ಷ್ಮೀ ಸ್ಟೀಲ್ ಮಂಗಳೂರು ಇದರ ಮಾರ್ಕೆಟಿಂಗ್ ಎ.ಜಿ.ಎಂ ಶ್ರೀನಿವಾಸ , ಬ್ರ್ಯಾಂಚ್ ಮ್ಯಾನೇಜರ್ ಸಂತೋಷ್ , ಅಸಿಸ್ಟೆಂಟ್ ಬ್ರ್ಯಾಂಚ್ ಮ್ಯಾನೇಜರ್ ಸುಜಿತ್ ಶೆಟ್ಟಿ ಸಹಿತ ಸ್ಟೀಲ್ ಫ್ಯಾಬ್ರಿಕೇಷನ್ ಎಸೋಸಿಯೆಷನ್ ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಹಾಗೂ ಹಲವರು ಅತಿಥಿಗಳು ಮತ್ತು ಸಂಘದ ಸದಸ್ಯರು ಹಾಜರಿದ್ದರು.


ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ತೆಂಕಿಲ ಎಲ್ಲರನ್ನೂ ಸ್ವಾಗತಿಸಿ , ಕಾರ್ಯದರ್ಶಿ ದಯಾನಂದ ಗೌಡ ಕೆಮ್ಮಾಯಿ ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ಜೈಸನ್ ಸಹಿತ ವಿವಿಧ ಪದಾಧಿಕಾರಿಗಳು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here