ಫೆ.1:ರಾಮಕ್ಷತ್ರೀಯ ಸೇವಾ ಸಂಘ, ಮಹಿಳಾ ವೃಂದ, ಯುವ ವೃಂದದ ವಾರ್ಷಿಕೋತ್ಸವ

0

ಪುತ್ತೂರು: ರಾಮಕ್ಷತ್ರೀಯ ಸೇವಾ ಸಂಘ, ರಾಮಕ್ಷತ್ರೀಯ ಮಹಿಳಾ ವೃಂದ, ರಾಮಕ್ಷತ್ರೀಯ ಯುವ ವೃಂದದ ವಾರ್ಷಿಕೋತ್ಸವ ಸಮಾರಂಭ ಫೆ.1ರಂದು ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ಸಭಾಂಗಣದಲ್ಲಿ ಜರಗಲಿದೆ.


ಪೂರ್ವಾಹ್ನ ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದಲ್ಲಿ ಸಮಾಜ ಬಾಂಧವರಿಂದ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ನೆರವೇರಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಮಕ್ಷತ್ರೀಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಪಿ, ಪುತ್ತೂರು ಅಬಕಾರಿ ಇಲಾಖೆಯ ಉಪನಿರೀಕ್ಷಕ ರಾಜ್ ಶೇಖರ್ ಆರ್, ಉದ್ಯಮಿ ನಾಗೇಶ್ ರಾವ್ ಬೆಂಗಳೂರು, ಮಂಗಳೂರು ಕೆನರಾ ವಿಕಾಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಐಶ್ವರ್ಯ ಕೆ.ರವರು ಭಾಗವಹಿಸಲಿದ್ದಾರೆ.

ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಾಮಕ್ಣತ್ರೀಯ ಸೇವಾ ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಕೆಮ್ಮಿಂಜೆ, ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ, ಕಾರ್ಯದರ್ಶಿ ಅರುಣ್ ಕುಮಾರ್ ಕ್ಯಾಂಪ್ಕೋ, ಕೋಶಾಧಿಕಾರಿ ರಾಜೇಂದ್ರ ಸಿ.ಎಚ್, ರಾಮಕ್ಷತ್ರೀಯ ಮಹಿಳಾ ವೃಂದದ ಗೌರವಾಧ್ಯಕ್ಷೆ ಉಷಾ ಅಶೋಕ್ ಮದಕ, ಅಧ್ಯಕ್ಷೆ ರೇಣುಕಾ ನವೀನ್, ಕಾರ್ಯದರ್ಶಿ ಸೌಮ್ಯ ಅರುಣ್ ಹಾರಾಡಿ, ಕೋಶಾಧಿಕಾರಿ ಸೀಮಾ ರೋಶನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೌರವಾರ್ಪಣೆ…
ಈ ಸಂದರ್ಭದಲ್ಲಿ ಪುತ್ತೂರು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆ, ಕಾಸರಗೋಡು ಮಧೂರು ಗ್ರಾಮ ಪಂಚಾಯತ್ ಸದಸ್ಯೆ ದೀಪ್ತಿ ರಾವ್, ಕಾಸರಗೋಡು ನಗರಸಭಾ ಸದಸ್ಯೆಯರಾದ ದಿವ್ಯ ಸಂದೀಪ್, ಸುಧಾರಾಣಿ, ಕಾಂಞಗಾಡ್ ನಗರಸಭೆ ಸದಸ್ಯೆ ಸುಕನ್ಯ, ನಿರಂತರ ಭಜನಾ ಸೇವಾಕರ್ತ ಬಾಲಚಂದ್ರ ಮೊಟ್ಟೆತ್ತಡ್ಕ, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಐದನೇ ರ‍್ಯಾಂಕ್, ತಾಲೂಕಿಗೆ ಪ್ರಥಮ ರ‍್ಯಾಂಕ್ ಗಳಿಸಿರುವ ಕು.ಶ್ರೀಯರವರಿಗೆ ಗೌರವಾರ್ಪಣೆ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here