ಫೆ.9,10 : ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನ, ಜಾತ್ರಾ ಮಹೋತ್ಸವ

0

ನೆಲ್ಯಾಡಿ: ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ತಿರ್ಲೆ ಕೊಣಾಲು ಇಲ್ಲಿ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ನಾಗೇಶ ತಂತ್ರಿವರ್ಯರ ನೇತೃತ್ವದಲ್ಲಿ ಪ್ರತಿಷ್ಠಾ ದಿನ ಹಾಗೂ ಜಾತ್ರಾ ಮಹೋತ್ಸವ ಫೆ.9 ಮತ್ತು 10ರಂದು ನಡೆಯಲಿದೆ ಎಂದು ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಅರ್ಚಕರಾದ ವೇದಮೂರ್ತಿ ಅಮೃತರಾಜ ಸರಳಾಯ, ಉತ್ಸವ ಸಮಿತಿ ಅಧ್ಯಕ್ಷ ಸುಂದರ ಶೆಟ್ಟಿ ಪುರ, ಕಾರ್ಯದರ್ಶಿ ಲೋಕೇಶ ಅಗರ್ತ ಹಾಗೂ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಫೆ.9ರಂದು ಸಂಜೆ 5ರಿಂದ ಹೊರೆಕಾಣಿಕೆ ಸಮರ್ಪಣೆ,5.30ರಿಂದ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನಾ ಸೇವೆ, 6ರಿಂದ ಅಂಗನವಾಡಿ ಮಕ್ಕಳಿಂದ ನೃತ್ಯ ವೈಭವ, 6.30ರಿಂದ ಜ್ಯೋತಿರ್ವೈದ್ಯ ಸಂಗೀತ ಸಂಗಮ ಬಳಗದವರಿಂದ ಸಂಗೀತ ಕಾರ್ಯಕ್ರಮ, 7 ರಿಂದ ಪ್ರಸಿದ್ಧ ನಾಟ್ಯ ಕಲಾವಿದರಿಂದ ಭರತನಾಟ್ಯ ವೈಭವ, ರಾತ್ರಿ 7.30ರಿಂದ ಸಭಾ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆ, 8ಕ್ಕೆ ಶ್ರೀ ಮಹಾವಿಷ್ಣುಮೂರ್ತಿಗೆ ರಂಗಪೂಜೆ, ಕೊಣಾಲು ದೇವತೆಗೆ ತಂಬಿಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 9ಕ್ಕೆ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ಫೆ.10ರಂದು ಬೆಳಿಗ್ಗೆ 6.30ಕ್ಕೆ ಉಷಾಪೂಜೆ, 8.30ರಿಂದ ದೇವತಾಪ್ರಾರ್ಥನೆ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ, ನಾಗತಂಬಿಲ, ನಾಳಿಕೇರ ಅಭಿಷೇಕ, ಪಂಚಾಮೃತ ಅಭಿಷೇಕ, ಪಂಚಗವ್ಯ ಅಭಿಷೇಕ, ಪಂಚವಿಂಶತಿ ಕಲಶಾಭಿಷೇಕ, ಅಶ್ವತ್ಥ ಪೂಜೆ, ಶ್ರೀ ಕೊಣಾಲುದೇವತೆಯ ಸನ್ನಿಧಾನದಲ್ಲಿ ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನಾ ಸೇವೆ, ರಾತ್ರಿ 7ರಿಂದ ಮಹಾಪೂಜೆ, ದೇವರ ಬಲಿಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 10.30ರಿಂದ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ‘ನಾಗರತಿ’ ತುಳು ಹಾಸ್ಯಪ್ರಧಾನ ಸಾಮಾಜಿಕ ಪ್ರಸಂಗ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here