






ಬಡಗನ್ನೂರು : ಕೃಷ್ಣಗಿರಿ ದ .ಕ.ಜಿ. ಪಂ .ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ಆಚರಿಸಿದರು.


ಪುಣಚ ಗ್ರಾ .ಪಂ. ಅಧ್ಯಕ್ಷೆ ಬೇಬಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಶಾಲಾ ವಾರ್ಷಿಕೋತ್ಸವ ಅಂದರೆ ಮಕ್ಕಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಜಾತ್ರೆ ಮತ್ತು ಮಕ್ಕಳ ಪ್ರತಿಭೆಯ ಅನಾವರಣದ ವೇದಿಕೆ ಇದಕ್ಕಾಗಿ ಸುಮಾರು ಒಂದು ತಿಂಗಳ ಹಿಂದಿನಿಂದ ಪೂರ್ವ ತಯಾರಿ ಮಾಡಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಶಿಕ್ಷಕ ವೃಂದದವರು ಮತ್ತು ಎಸ್ ಡಿ. ಯಂ. ಸಿ ಸದಸ್ಯರು ಶ್ರಮಿಸಿದ್ದಾರೆ ಎಂದರು.




ಮುಖ್ಯ ಅತಿಥಿ ವಿಶ್ವನಾಥ ರೈ ಕೋಡಂದೂರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತವೆ ಎಂದರು. ಪುಣಚ ಗ್ರಾ. ಪಂ.ಸದಸ್ಯರಾದ ಪ್ರತಿಭಾ ಜಗನ್ನಾಥ ಗೌಡ, ಹರೀಶ್ ಪೂಜಾರಿ, ರವಿ .ಎಸ್. ಸಂಧರ್ಭೋಚಿತ ಮಾತನಾಡಿ ಶುಭ ಹಾರೖೆಸಿದರು.ಶಾಲಾ ಎಸ್. ಡಿ. ಯಂ. ಸಿ ಅಧ್ಯಕ್ಷ ರಾಜೇಶ್. ಎನ್. ಗೌಡ ರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷೆ ಜಯಂತಿ.ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಈ ಸಂದರ್ಭದಲ್ಲಿ ಶಾಲೆಯ ಶಾಶ್ವತದಾನಿಗಳಾದ ವಿಶ್ವನಾಥ ರೈ , ಸುಬೋಧ್ ರೈ, ಭಾರತಿ .ಜೆ .ರೈ ಭಾಸ್ಕರ್ ರೈ, ಪುರುಷೋತ್ತಮ ಗೌಡ, ಎಲ್ಯಣ್ಣ ಗೌಡ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಪದವೀಧರ ಸಹಶಿಕ್ಷಕ ಆಂಜನೇಯ ಆಲದ ಕಟ್ಟಿ ರವರು ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಜಯಶ್ರೀ .ಎಂ. ರವರು ಶಾಲಾ ವಾರ್ಷಿಕ ವರದಿ ವಾಚಿಸಿದರು. ಪ್ರಮಿತ .ಜಿ. ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು. ರೇಷ್ಮಾ ವಂದಿಸಿದರು. ಅತಿಥಿ ಶಿಕ್ಷಕಿ ಶ್ರುತಿ.ಎಂ ಕಾರ್ಯಕ್ರಮ ನಿರ್ವಹಿಸಿದರು.ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಕುರುಡ ಕಟ್ಟೆ ಮತ್ತು ಬರೆಂಜ ಅಂಗನವಾಡಿ ಪುಟಾಣಿಗಳು ಮತ್ತು ಸಮೃದ್ಧಿ ಸಂಜೀವಿನಿ ಒಕ್ಕೂಟ ಬಲ್ನಾಡು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ನುಡಿನಮನ
ಇತ್ತೀಚಿಗೆ ಅಕಾಲಿಕವಾಗಿ ಅಗಲಿದ ನಿವೃತ್ತ ಮುಖ್ಯ ಶಿಕ್ಷಕ ದಿವಂಗತ ನಾರಾಯಣ ನಾಯ್ಕ ರವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಎಸ್. ಡಿ. ಯಂ. ಸಿ . ಸದಸ್ಯ ಜಯಪ್ರಕಾಶ್ ಪುತ್ತೂರು ನುಡಿನಮನ ಸಲ್ಲಿಸಿದರು.










