






ಪುತ್ತೂರು:ಕರ್ನಾಟಕ ಸರಕಾರ ಧಾರ್ಮಿಕ ಧತ್ತಿ ಇಲಾಖೆಗೊಳಪಟ್ಟ ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವಾರ್ಷಿಕ ಉತ್ಸವ ಮತ್ತು ನೇಮೋತ್ಸವವು ಫೆ.24 ರಿಂದ 26ರ ವರೆಗೆ ಜರಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಪ್ತಧಾನ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಡಿತ್ತಾಯರವರು ಪ್ರಾರ್ಥಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸತೀಶ್ ಶೆಟ್ಟಿ ಪಡ್ಯೊಟ್ಡು, ಉತ್ಸವ ಸಮಿತಿ ಅಧ್ಯಕ್ಷರಾದ ನವೀನ್ ಪಡ್ಪು, ಕಾರ್ಯದರ್ಶಿ ಅಶೋಕ ಹಲಸಿನಕಟ್ಟೆ, ಕೋಶಾಧಿಕಾರಿ ವಿಶ್ವನಾಥ ಕೆಮ್ಮಟೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಪ್ಪ ಪೂಜಾರಿ ಪಡ್ಪು, ಸುರೇಶ ಕಜೆ, ನಾರಾಯಣ ಶೆಟ್ಟಿ ಹೊಳಕರೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಸಾಂತಿತ್ತಡ್ಕ, ಪ್ರಮುಖರಾದ ನಾರಾಯಣ ಕನ್ಯಾನ, ಮಾಧವ ಗೌಡ ಹೆನ್ನಾಳ, ಬೂದಪ್ಪ ಗೌಡ ಕಾಯರ್ತಡಿ, ಜಗದೀಶ್ ಹಂಚಿನಮನೆ, ಕೃಷ್ಣಪ್ಪ ಗೌಡ ಕುಬಲ, ಚೆನ್ನಕೇಶವ ಕನ್ಯಾನ, ರುಕ್ಮಯ ಗೌಡ ಕೆಮ್ಮಟೆ, ಬೇಬಿ ವಿಹಾನಿ ಪಡ್ಪು, ಮಾ|ಸ್ಕಂದ ಮತ್ತೀತರರು ಉಪಸ್ಥಿತರಿದ್ದರು.













