ರಾಜ್ಯ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟ : ವಿವೇಕಾನಂದ ಆ.ಮಾ ಶಾಲೆಯ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

0

ಪುತ್ತೂರು: ರಾಜ್ಯ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟವು ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಫೆ.7,8ರಂದು ರಂದು ನಡೆಯಿತು.

ಈ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ಗೌಶಿಕ್ ರೈ( ಲೊಕೇಶ್‌ ಹಾಗೂ ಸುನೀತಾ ದಂಪತಿಯ ಪುತ್ರ) 50 ಮೀ ಓಟ ದಲ್ಲಿ ಪ್ರಥಮ , ಉದ್ದ ಜಿಗಿತದಲ್ಲಿ ದ್ವಿತೀಯ, 9 ನೇ ತರಗತಿಯ ಶ್ರೇಯ ಬಿ. ಎ ಗುಂಡು ಎಸೆತದಲ್ಲಿ ತೃತಿಯ ಸ್ಥಾನ, 10ನೇ ತರಗತಿ ಮಾನ್ವಿ ಎ ವೈ ಇವರು ಉತ್ತಮ ಪ್ರಯತ್ನ ಪಟ್ಟಿದ್ದಾರೆ. ಇವರಿಗೆ ವಿವೇಕಾನಂದ ಶಾಲೆಯ ಶಿಕ್ಷಕಿ ರಶ್ಮಿ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here