ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ ವಾರ್ಷಿಕೋತ್ಸವ

0

ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಬೆಟ್ಟಂಪಾಡಿ ಇದರ 43ನೇ ವಾರ್ಷಿಕೋತ್ಸವ ಹಾಗೂ ನಗರ ಭಜನೆಯ ಮಂಗಲೋತ್ಸವವು ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್‌ ಕಾನೂಮೂಲೆಯವರ ನೇತೃತ್ವದಲ್ಲಿ ಫೆ.14ರಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಜರಗಿತು.

ಬೆಳಿಗ್ಗೆ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ, ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್‌ ರೈ ಚೆಲ್ಯಡ್ಕ ದೀಪ ಪ್ರಜ್ವಲನೆ ಮಾಡಿ, ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಜರಗಿತು. ಸಂಜೆ ಭಜನಾ ಮಂಗಲೋತ್ಸವ ನಡೆಯಿತು. ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್‌ ಕುಮಾರ್‌ ಬಲ್ಲಾಳ್‌, ಮೊಕ್ತೇಸರ ವಿನೋದ್‌ ರೈ ಗುತ್ತು ಸೇರಿದಂತೆ ಊರ ಪರವೂರ ಭಕ್ತಾಭಿಮಾನಿಗಳು ಪಾಲ್ಗೊಂಡರು. ಭಜನಾ ಸಂಘದ ಗೌರವಾಧ್ಯಕ್ಷ ಶಿವಕುಮಾರ್‌ ಬಲ್ಲಾಳ್‌ ಬೆಟ್ಟಂಪಾಡಿ ಬೀಡು, ಅಧ್ಯಕ್ಷ ಪ್ರಮೋದ್‌ ರೈ ಬರೆ, ಕಾರ್ಯದರ್ಶಿ ಸುಶಾನ್‌ ರೈ ಅಂಗರಾಜೆ, ಕೋಶಾಧಿಕಾರಿ ಸಂಜಯ್‌ ಬಲ್ಲಾಳ್‌ ಬೀಡು, ಸಂಚಾಲಕ ಗೌರಿಶಂಕರ ಗುಂಡ್ಯಡ್ಕ, ಪದಾಧಿಕಾರಿಗಳು ವಿವಿಧ ರೀತಿಯಲ್ಲಿ ಸಹಕರಿಸಿದರು.


ಜ.17ರಂದು ಆರಂಭಗೊಂಡ ನಗರಭಜನೆಯಲ್ಲಿ  ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ, ಬೆಟ್ಟಂಪಾಡಿ, ಶ್ರೀ ಕೃಷ್ಣ ಭಜನಾ ಮಂಡಳಿ, ಗುಮ್ಮಟಗದ್ದೆ,  ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ, ಬೆಟ್ಟಂಪಾಡಿ, ಶ್ರೀ ಭ್ರಮರಾಂಬಿಕಾ ಭಜನಾ ಮಂಡಳಿ, ರೆಂಜ, ಬೆಟ್ಟಂಪಾಡಿ, ಹಾಗೂ ಶ್ರೀ ಕೃಷ್ಣ ಭಜನಾ ಮಂಡಳಿ, ಗುಂಡ್ಯಡ್ಕ, ಬೆಟ್ಟಂಪಾಡಿ ಇವರು ಪಾಲ್ಗೊಂಡರು. ಸಂಘದ ವಾರ್ಷಿಕೋತ್ಸವದ ದಿನ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ, ಬೆಟ್ಟಂಪಾಡಿ, ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಟ್ಟಂಪಾಡಿ, ಶ್ರೀ ಕೃಷ್ಣ ಭಜನಾ ಮಂಡಳಿ, ಗುಂಡ್ಯಡ್ಕ, ಬೆಟ್ಟಂಪಾಡಿ, ಶಬರಿ ಮಹಿಳಾ ಭಜನಾ ಮಂಡಳಿ ಶ್ರೀ ರಾಮನಗರ ರೆಂಜ, ಶ್ರೀ ಸಿದ್ದಿವಿನಾಯಕ ಮಹಿಳಾ ಭಜನಾ ಮಂಡಳಿ ವಿನಾಯಕನಗರ, ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ಗುಮ್ಮಟಗದ್ದೆ,  ಶ್ರೀ ಕೃಷ್ಣ ಭಜನಾ ಮಂಡಳಿ, ಗುಮ್ಮಟಗದ್ದೆ, ಶ್ರೀ ಅಯ್ಯಪ್ಪ ಭಜನಾ ಸಂಘ, ಶ್ರೀರಾಮ ನಗರ, ರೆಂಜ-ಬೆಟ್ಟಂಪಾಡಿ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ವಿನಾಯಕ ನಗರ, ಬೆಟ್ಟಂಪಾಡಿ, ಶ್ರೀ ಭಟ್ಟವಿನಾಯಕ ಭಜನಾ ಮಂಡಳಿ, ಬಲ್ನಾಡು, ಶ್ರೀ ಶಾರದಾಂಬಾ ಭಜನಾ ಮಂಡಳಿ, ಪುತ್ತೂರು, ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಕುಂಞಮಲೆ, ದರ್ಬೆ
ಹಾಗೂ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇವರು ಭಾಗವಹಿಸಿದರು.

LEAVE A REPLY

Please enter your comment!
Please enter your name here