






ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಡನ್ನಲ್ಲಿ ಫೆ.12ರಂದು ಕಿಡ್ಸ್ ಫೆಸ್ಟ್ ಕಾರ್ಯಕ್ರಮ ನಡೆಯಿತು.






ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ವಿಶೇಷ ಆಹ್ವಾನಿತರಾಗಿ ಯಮುನಾ ಎಸ್. ರೈ ಕುಂತೂರು, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಿರೀಶ್ ಎ.ಪಿ., ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಆಚಾರ್ಯ ಇಜ್ಜಾವು ಉಪಸ್ಥಿತರಿದ್ದರು.
ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಬ್ಲೋಯಿಂಗ್ ಬಬ್ಬಲ್ಸ್, ಫೀಡ್ ದ ಲಯನ್, ನಂಬರ್ ಶೂಟ್, ಬಾಲ್ ಇಂದ ಬಕೆಟ್, ಡ್ರಾಯಿಂಗ್ ಹಾಗೂ ಪೇಂಟಿಂಗ್ ಸ್ಪರ್ಧೆಯಲ್ಲಿ ಮಕ್ಕಳು ಹೆತ್ತವರೊಂದಿಗೆ ಭಾಗವಹಿಸಿ ಖುಷಿಪಟ್ಟರು. ವಿಶೇಷ ಆಕರ್ಷಣೆಯಾಗಿ ನಡೆದ ಆಹಾರ ಮೇಳದಲ್ಲಿ ಪೋಷಕರೇ ತಯಾರಿಸಿದ ಪಿಸ್ತಾ ಜ್ಯೂಸ್, ಫ್ರೂಟ್ಸ್ ಸಲಾಡ್, ಫೈನಾಪ್ಪಲ್ ಸೋಫ್ಲೆ, ದ್ರಾಕ್ಷಿ ಜ್ಯೂಸ್, ಪಾನಿಪುರಿ, ಶಾರ್ ಜಾಹ್ ಮಿಕ್ಸ್ ಜ್ಯೂಸ್, ಕ್ಯಾರೆಟ್ ಹಲ್ವಾ, ಚರ್ಮುರಿ, ನಿಂಬೆ ಮತ್ತು ಮಾವಿನ ಕುಲ್ಕಿ ಜ್ಯೂಸ್, ಗುಲಾಬ್ ಜಾಮೂನು, ಕ್ಯಾರೆಟ್ ಜ್ಯೂಸ್, ಚುರುಮುರಿ/ಮಂಡಕ್ಕಿ, ತರಕಾರಿಗಳು, ಬಾಳೆಹಣ್ಣಿನ ಪೋಡಿ, ನೀರುಳ್ಳಿ ಬಜೆ, ಚುರುಮುರಿ, ಬಟಾಟೆ, ಹಣ್ಣು ಮತ್ತು ತರಕಾರಿ ಹೀಗೆ ಹಲವು ಬಗೆಯ ಆಹಾರ ಪದಾರ್ಥಗಳು ಹಾಗೂ ತರಕಾರಿಗಳ ಮಾರಾಟ ನಡೆಯಿತು. ಮಕ್ಕಳ ಜೊತೆ ಪೋಷಕರು ಸೇರಿ ಸುಮಾರು 32,568 ರೂಪಾಯಿಗಳ ಆಹಾರ ಪದಾರ್ಥ ಮಾರಾಟ ಮಾಡಿದರು.
ಸಂಸ್ಥೆಯ ಆಡಳಿತ ಅಧಿಕಾರಿ ಆನಂದ್ ಎಸ್.ಟಿ., ವ್ಯವಸ್ಥಾಪಕರಾದ ರಮೇಶ್ ರೈ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ. ಹಾಗೂ ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.










