ಕಾರ್ಜಾಲು ಶ್ರೀ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ಜಾತ್ರೋತ್ಸವ- ಐದು ಸಾವಿರಕ್ಕೂ ಅಧಿಕ ಮಂದಿಗೆ ಅನ್ನಪ್ರಸಾದ ವಿತರಣೆ

0

ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಮೂಲ ಸ್ಥಾನ ಕಬಕ ಗ್ರಾಮದ ಕಾರ್ಜಾಲು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ಜಾತ್ರೋತ್ಸವವು ಫೆ.28ರಂದು ನಡೆದ ಮಧ್ಯಾಹ್ನ ಸಾರ್ವಜನಿಕ ಅನ್ನಪ್ರಸಾದ 5 ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.


ಬೆಳಿಗ್ಗೆ ಗಣಪತಿ ಹೋಮ, ಸ್ಥಳಶುದ್ದಿ ಹೋಮ ಮತ್ತು ಕಲಶ ಪ್ರತಿಷ್ಠೆ ನಡೆಯಿತು. ತಂಬಿಲ ಸೇವೆಯ ಬಳಿಕ ಮಧ್ಯಾಹ್ನ ಕಾರ್ಜಾಲು ಧೂಮಾವತಿ, ಕಲ್ಕುಡ, ಕಲ್ಲುರ್ಟಿ ದೈವಗಳ ಸನ್ನಿಧಿಯಲ್ಲಿ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಿತು. ದೊಂಪದ ಬಲಿ ನೇಮೋತ್ಸವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಕಲ್ಲೇಗ, ಉತ್ಸವ ಸಮಿತಿ ಅಧ್ಯಕ್ಷ ಕೆ.ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವೆಲಪ್ ಮೆಂಟ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ವಿ.ಜೆ ಅಭಿಲಾಶ್, ವಿ.ಜೆ. ಆಕಾಶ್, ಸಂತೋಷ್ ಕುಮಾರ್ ಎ, ಸಂತೋಷ್ ರೈ ನಳಿಲು, ನಿವೃತ್ತ ಎ.ಎಸ್.ಐ ಸುರೇಶ್ ರೈ, ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳು, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ರಾತ್ರಿ ಕುಣಿತ ಭಜನೆ, ನೇಮೋತ್ಸವ:
ರಾತ್ರಿ ರಾಧಾಕೃಷ್ಣ ಮಕ್ಕಳ ಭಜನಾ ತಂಡ ಶಿಂಗಾಣಿ ಮತ್ತು ಶ್ರೀ ವಿಷ್ಣುಮೂರ್ತಿ ಭಜನಾ ತಂಡ, ವಿಷ್ಣುನಗರ ಕಂಡಡ್ಕ ಇವರಿಂದ ಕುಣಿತ ಭಜನೆ ನಡೆಯಿತು. ರಾತ್ರಿ ಗಂಟೆ 9.30ಕ್ಕೆ ಕಾರ್ಜಾಲು ಗುತ್ತಿನಿಂದ ಧೂಮಾವತಿ, ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಭಂಡಾರ ಹೊರಟು ಗದ್ದೆಯಲ್ಲಿ ಮೂರು ಸುತ್ತು ಬಂದು ವಿವಿಧ ಕಾರ್ಯಕ್ರಮ ನಡೆಯಿತು. ಜಿನ್ನಪ್ಪ ಗೌಡ ಪ್ರಧಾನ ದರ್ಶನಪಾತ್ರಿಯಾಗಿದ್ದರು. ನಂತರ ಗೋಂದಳ ಪೂಜೆ, ಗ್ರಾಮದೈವ ಧೂಮಾವತಿ, ಕಲ್ಕುಡ, ಕಲ್ಲುರ್ಟಿ ಹಾಗೂ ಇತರ ದೈವಗಳ ದೊಂಪದ ಬಳಿ ನೇಮೋತ್ಸವ ನಡೆಯಿತು.

LEAVE A REPLY

Please enter your comment!
Please enter your name here