ಸೆಮಿಕಂಡಕ್ಟರ್- ಆಧುನಿಕ  ಎಲೆಕ್ಟ್ರಾನಿಕ್ಸ್ನ ಮೆದುಳು

0

ಸೆಮಿಕಂಡಕ್ಟರ್ ಉದ್ಯಮವು ಆಧುನಿಕ ಡಿಜಿಟಲ್ ಕ್ಷೇತ್ರದ ಆಧಾರಸ್ತಂಭವಾಗಿ ನಿಂತಿದ್ದು , ಸ್ಮಾರ್ಟ್ ಫೋನ್ ಮತ್ತು ಕಂಪ್ಯೂಟರ್‌ಗಳಿಂದ ಹಿಡಿದು ಆಟೋಮೊಬೈಲ್ ಮತ್ತು  ದೇಶ ರಕ್ಕ್ಷಿಸ ಬಲ್ಲ ರಕ್ಷಣಾ ವ್ಯವಸ್ಥೆಯವರೆಗೆ ಸೆಮಿ ಕಂಡಕ್ಟರ್ ನ ಬಳಕೆ ಅಗತ್ಯ. ಆದ್ದರಿಂದಲೇ ಆಮದು ಕಡಿಮೆ ಮಾಡಿ ದೇಶೀಯವಾಗಿ ಇವುಗಳನ್ನು ಉತ್ಪಾದಿಸಲು ಕೇಂದ್ರ ಪಣತೊಟ್ಟಿದೆ. ಭಾರತವನ್ನು ಜಾಗತಿಕೆ ಸೆಮಿ ಕಂಡಕ್ಟರ್ ಕೇಂದ್ರವನ್ನಾಗಿಸುವ ದೃಷ್ಟಿಯಲ್ಲಿ “ಇಂಡಿಯಾ ಸೆಮಿ ಕಂಡಕ್ಟರ್ ಮಿಷನ್ 2021 “ ನ್ನು ಸ್ಥಾಪಿಸಲಾಗಿ ,ಅದರ ಪ್ರಕಾರ ಭಾರತವನ್ನು ಜಾಗತಿಕೆ ಸೆಮಿ ಕಂಡಕ್ಟರ್ ಉತ್ಪನ್ನ ಗಳ  ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ. 2030 ರ ವೇಳೆಗೆ, ಭಾರತವು ವಿಶ್ವದ 1.1 ಡಾಲರ್ ಟ್ರಿಲಿಯನ್ ಸೆಮಿಕಂಡಕ್ಟರ್ ಮಾರುಕಟ್ಟೆಯ 10% ಅನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದು , ಇದು ಈ ಧೈತ್ಯ ಕ್ಷೇತ್ರದ ಮಾರುಕಟ್ಟೆಯನ್ನು ಪಡೆಯುವಲ್ಲಿ ಒಂದು ಪುಟ್ಟ ಹೆಜ್ಜೆ ಎಂದೆನಿಸಿಕೊಳ್ಳುತ್ತದೆ.

ಸೆಮಿ ಕಂಡಕ್ಟರ್ ಗಳನ್ನು ಆಧುನಿಕ ಎಲೆಕ್ಟ್ರಾನಿಕ್ಸ್ ನ ಮೆದುಳು ಎಂದೇ ಕರೆಯಲಾಗುತ್ತದೆ. ವಿದ್ಯುತ್ ಹರಿವಿಗೆ ಅನುಕೂಲವಾಗುವ ಲೋಹಗಳಿಂದ ತಯಾರಿಸಲ್ಪಟ್ಟ  ವಾಹಕಗಳು ಹಾಗು ವಿದ್ಯುತ್ ಹರಿವಿಗೆ ಅವಕಾಶವನ್ನೇ ನೀಡದ ಗಾಜು ಅಥವಾ ಪಾಲಿಮರ್ ನಿಂದ ತಯಾರಿಸಲ್ಪಟ್ಟ ವಿದ್ಯುತ್ ನಿರೋಧಕಗಳ ನಡುವಿನ ಗುಣವನ್ನು ಹೊಂದಿರುವ ಅರೆವಾಹಕ ವಸ್ತುಗಳಲನ್ನು ಸೆಮಿ ಕಂಡಕ್ಟರ್ ಎಂದು ಕರೆಲಾಯಗುತ್ತದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿನ ವಿದ್ಯುತ್ ಹರಿವನ್ನು ನಿಯಂತ್ರಿಸುವುದು ಅರೆವಾಹಕಗಳಾದ ಸೆಮಿ ಕಂಡಕ್ಟರ್ ಗಳ  ಪ್ರಧಾನ ಕಾರ್ಯ. ಇದರಿಂದ ಉಪಕರಣಗಳಲ್ಲಿನ ದತ್ತಾಂಶಗಳನ್ನು ಸಂಸ್ಕರಿಸಲು, ಸಂಗ್ರಹಿಸಲು ಮತ್ತು ರವಾನಿಸಲು ಸೆಮಿ ಕಂಡಕ್ಟರ್ ಗಳು ಅವಷ್ಯಕವಾಗಿವೆ. ಸಾಮಾನ್ಯವಾಗಿ  ಸಿಲಿಕನ್ ನಿಂದ ತಯಾರಿಸಲ್ಪಡುವ ಇವು ಇಂಟಿಗ್ರೇಟೆಡ್ ಚಿಪ್ಸ್ ಹಾಗು ಮೈಕ್ರೋ ಚಿಪ್ಸ್ ಗಳಲ್ಲಿ ಬಳಕೆಯಾಗುದಲ್ಲದೆ ,ಟ್ರಾನ್ಸಿಸ್ಟರ್ , ಡಯೋಡ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಘಟಕಗಳ ಕಾರ್ಯ ನಿರ್ವಹಣೆಯನ್ನು ಸಾಧ್ಯವಾಗಿಸುತ್ತವೆ. ಹೀಗಾಗಿ ಆಧುನಿಕ ಎಲೆಕ್ಟ್ರಾನಿಕ್ಸ್ ಜಗತ್ತಿನಲ್ಲಿ ಸೆಮಿ ಕಂಡಕ್ಟರ್ ಗಳು ಸರ್ವ ವ್ಯಾಪಿ ಆಗಿವೆ.

ಸೆಮಿ ಕಂಡಕ್ಟರ್ ಉದ್ದಿಮೆಯಿಂದ ಭಾರತಕ್ಕೆ ಬಹಳ ಲಾಭ ಇದೆ. ಸೆಮಿಕಂಡಕ್ಟರ್ ಗಳ ಅಗತ್ಯತೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮುಖ್ಯ. ಆದರೆ ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವುದು ಆಮದು ಮಾಡಿಕೊಂಡಂತಹ ಸೆಮಿ ಕಂಡಕ್ಟರ್ ಚಿಪ್ಪುಗಳು. ಇವುಗಳು ದೇಶೀಯವಾಗಿ ತಯಾರಾದರೆ ಬೆಲೆಯೂ ಕಡಿಮೆಯಾಗುತ್ತದೆ. ಪೂರಕವಾಗಿ ದೇಶೀಯ ಎಲೆಕ್ಟ್ರಾನಿಕ್ಸ್ , ಟೆಲಿಕಾಂ ಉಪಕರಣ ಇತ್ಯಾದಿ ಉದ್ದಿಮೆಗಳ ಬಳವಣಿಗೆಯೂ  ಆಗುತ್ತದೆ ಹಾಗು ದೇಶದ ಜನತೆಗೆ ಉದ್ಯೋಗ ಅವಕಾಶವೂ ಹೆಚ್ಚುತ್ತದೆ. 

ಭಾರತದ ಮುಂದಿರುವ ಸವಾಲುಗಳಲ್ಲಿ ಮೊದಲನೆಯದು ಮೂಲ ಸೌಕರ್ಯದ ಕೊರತೆ. ಸೆಮಿ ಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲು ಸ್ಥಿರವಾದ ವಿದ್ಯುತ್ ಪೂರೈಕೆ , ಸುಧಾರಿತ ಲಾಜಿಸ್ಟಿಕ್ಸ್ ಮತ್ತು ನೀರು ಸೇರಿದಂತೆ ವಿವಿಧ ನೈಸರ್ಗಿಕ ಸಂಪನ್ಮೂಲಗಳ ಅಗತ್ಯತೆ ಇದೆ. ಇದನ್ನು ಪೂರೈಸಲು ಸರ್ಕಾದ ಯೋಜನೆಗಳು, ಕ್ರಮಗಳು ಮಹತ್ವದ್ದು ಎನಿಸುತ್ತವೇ . ಎರಡನೆಯದಾಗಿ ತಾಂತ್ರಿಕ ಕೊರತೆ-ಭಾರತವು ಹೆಚ್ಚಾಗಿ ಸೆಮಿ ಕಂಡಕ್ಟರ್ ಗಳ ಜೋಡಣೆ ಹಾಗು ಪರೀಕ್ಷೆಯ ಮೇಲೆ ಗಮನ ಹರಿಸುತ್ತಿದೆಯೇ ಹೊರತು , ಅತ್ಯಾಧುನಿಕ ಸುಧಾರಿತ ಸೆಮಿ ಕಂಡಕ್ಟರ್ ನೋಡ್ ಗಳ ಉತ್ಪಾದನೆಯಲ್ಲಿ ಹಿಂದುಳಿದಿದೆ. ಮೂರನೆಯದಾಗಿ ಜಾಗತಿಕ ಸ್ಪರ್ಧೆ- ಚೀನಾ ಮುಂತಾದ ದೇಶಗಳು ತಮ್ಮ ಸೆಮಿ ಕಂಡಕ್ಟರ್ ಸಾಮರ್ಥ್ಯವನ್ನು ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿವೆ, ಇದು ಭಾರತಕ್ಕೆ ಕಠಿಣ ಸ್ಪರ್ಧೆ ಒಡ್ಡುತ್ತಿದೆ.

ಆದರೆ ಭಾರತವು ತಾನು ಬಳಸುತ್ತಿರುವ ಸೆಮಿ ಕಂಡಕ್ಟರ್ ಉತ್ಪಾದನೆ ಹೆಚ್ಚಿಸಲು ಹಲವು ಉಪಕ್ರಮಗಳನ್ನು ಆರಂಭಿಸಿದೆ. ಇದರಲ್ಲಿ ಮೂಲಧನ ಸಬ್ಸಿಡಿ ಹಾಗು ತೆರಿಗೆ ವಿನಾಯಿತಿ ನೀಡುವಂತಹ ಪ್ರೊಡಕ್ಷನ್ ಲಿಂಕ್ಡ್ ಇಂಸೆಂಟಿವ್ಸ್ ಯೋಜನೆ ಮತ್ತು ಸೆಮಿ ಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಇಂಸೆಂಟಿವ್ಸ್ ನಂತಹ ಯೋಜನೆಗಳು ಸೇರಿವೆ.

ವಿವಿಧ ಕ್ಷೇತ್ರಗಳಲ್ಲಿ ಸೆಮಿ ಕಂಡಕ್ಟರ್ ಬಳಕೆ ಮಾಡಲಾಗುತ್ತದೆ. ಉದಾ– ಕಂಪ್ಯೂಟರ್, ಸರ್ವರ್, ದತ್ತಾಂಶ ಕೇಂದ್ರ ,ಮೈಕ್ರೋ ಪ್ರೊಸೆಸರ್, ಮೆಮೊರಿ ಚಿಪ್ಪುವುಗಳು. ಸೆಲ್ ಫೋನ್ ಗಳು , ಉಪಗ್ರಹ ವ್ಯವಸ್ಥೆ, ನಿಸ್ತಂತು ಸಂಹವನ ಉಪಕರಣ, ಆಪ್ಟಿಕಲ್ ಫೈಬರ್,  ಸೌರಕೋಶ, ವಿದ್ಯುತ್ ನಿರ್ವಹಣಾ ವ್ಯವಸ್ಥೆ, ನವೀಕರಿಸಬಲ್ಲ ಇಂಧನ ತಂತ್ರಜ್ಞಾನ. ಆಟೋಮೊಬೈಲ್ಎಂಜಿನ್ ನಿಯಂತ್ರಣ ಘಟಕ, ಸುರಕ್ಷಾ ವ್ಯವಸ್ಥೆ, ಎಲೆಕ್ಟ್ರಿಕ್ ವಾಹನಗಳು. ವೈದ್ಯಕೀಯ ಚಿತ್ರಣ ( ಎಂ ಆರ್ ಐ) , ರೋಗ ನಿರ್ಣಯ ಉಪಕರಣಗಳು, ಮಾನಿಟರಿಂಗ್ ಉಪಕರಣಗಳು. ಗೃಹೋಪಕರಣ ಬಳಕೆ ಟಿವಿ, ಎಲ್ ಇ ಡಿ  ಬಲ್ಬ್, ರೆಫ್ರಿಜಿರೇಟರ್, ವಾಷಿಂಗ್ ಮಷೀನ್. ರಕ್ಷಣೆ ವ್ಯವಸ್ಥೆ ಬಳಸಲ್ಪಡುವ ಕ್ಷಿಪಣಿಗಳು, ರಾಕೆಟ್ ತಂತ್ರಜ್ಞಾನ, ರಾಡಾರ್, ಏರೋಸ್ಪೇಸ್ ಉಪಕರಣ, ಕೈಗಾರಿಕೆ ಗಳಲ್ಲಿ ಬಳಸಲ್ಪಡುವ ರೊಬೊಟಿಕ್ಸ್, ಸೆನ್ಸರ್ ಆಧಾರಿತ ಯಂತ್ರಗಳು… ಇತ್ಯಾದಿ.

ಅತಿ ಹೆಚ್ಚು ಸೆಮಿ ಕಂಡಕ್ಟರ್ ಉತ್ಪಾದಕ ದೇಶಗಳಲ್ಲಿ ಜಪಾನ್ ಆಗ್ರಾ ಸ್ಥಾನದಲ್ಲಿದ್ದರೆ ,ಕ್ರಮವಾಗಿ ತೈವಾನ್ , ಅಮೇರಿಕಾ, ಚೀನಾ , ಜರ್ಮನಿ ,ದ. ಕೊರಿಯಾ ದೇಶಗಳು ನಂತರದ ಸ್ಥಾನದಲ್ಲಿವೆ.

ಹೀಗಾಗಿ ಆಧುನಿಕ ವೈಜ್ಞಾನಿಕ ಜಗತ್ತಿನ ಎಲೆಕ್ಟ್ರಾನಿಕ್ಸ್ ನ  ಮೆದುಳು ಎಂದು ಕರೆಯಲಾಗುವ ಸೆಮಿ ಕಂಡಕ್ಟರ್ ಗಳು ಭಾರತದಲ್ಲಿಯೂ ಉತ್ಪಾದನೆ ಆಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಯಶಸ್ಸನ್ನು ಪಡೆಯುವಂತಾಗಲಿ ಎಂದು ಆಶಿಸೋಣ.

ಲೇಖಕರು – ಯತೀಶ್ ರಾವ್ ಸುರತ್ಕಲ್ , ಉಪನ್ಯಾಸಕರು, ಸರ್ಕಾರೀ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಮಂಗಳೂರು.

LEAVE A REPLY

Please enter your comment!
Please enter your name here