






ಒಬ್ಬ ವಿದ್ಯಾರ್ಥಿ ಯಾವ ಕೋರ್ಸ್ ಅಥವಾ ವೃತ್ತಿಯನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸುವಾಗ ಆಪ್ಟಿಟ್ಯೂಡ್ ಮ್ಯಾಪಿಂಗ್ ಅತ್ಯಂತ ಪ್ರಮುಖ. ಇದು ವಿದ್ಯಾರ್ಥಿಯ ಸಾಮರ್ಥ್ಯಗಳು ಆಯ್ಕೆಮಾಡಲಿರುವ ವೃತ್ತಿಗೆ ಹೊಂದಿಕೆಯಾಗುತ್ತವೆಯೇ ಇಲ್ಲವೇ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ.


ಸರಿಯಾದ ವೃತ್ತಿ/ಕೋರ್ಸ್ ಆಯ್ಕೆ ಮಾಡುವುದು ಜೀವನದ ಅತ್ಯಂತ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿದೆ. ಪರಿಣಿತರ ಪ್ರಕಾರ ವೃತ್ತಿ ಆಯ್ಕೆ ಹೆಚ್ಚಾಗಿ ವಿದ್ಯಾರ್ಥಿಯ ಆಪ್ಟಿಟ್ಯೂಡ್ ಮತ್ತು ಆಸಕ್ತಿಗಳ ಮೇಲೆ ಆಧಾರವಾಗಿರಬೇಕು. ಆದರೆ ದುಃಖಕರವಾಗಿ ಭಾರತದಲ್ಲಿ ಸಹಪಾಠಿಗಳ ಒತ್ತಡ, ಪೋಷಕರ ನಿರೀಕ್ಷೆಗಳನ್ನು ಪೂರೈಸಬೇಕಾದ ಒತ್ತಾಯ ಮತ್ತು ಬೇರೆ ಅನೇಕ ಕಾರಣಗಳು ಈ ನಿರ್ಧಾರದಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಹಲವಾರು ಯುವಕರು ತಮ್ಮ ಜೀವನದಲ್ಲಿ ಏನು ಮಾಡಲು ಬಯಸುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡಿರದಿಲ್ಲ. ಅವರಿಗಿರುವ ಸರಳ ದಾರಿ ಎಂದರೆ ಮತ್ತೊಬ್ಬರು ಆಯ್ಕೆ ಮಾಡಿದ ಮಾರ್ಗವನ್ನು ಅನುಸರಿಸುವುದು ಅಥವಾ ಪೊಷಕರು ಹೇಳಿದ ವೃತ್ತಿಯನ್ನು ಆರಿಸುವುದು. ಆದರೆ ಇದು ಸರಿಯಾದ ವಿಧಾನವಲ್ಲ. ಅವರು ತಪ್ಪು ವೃತ್ತಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆಂದು ಅರಿತುಕೊಂಡಾಗ, ಪರಿಸ್ಥಿತಿಯನ್ನು ನಿಭಾಯಿಸುವುದು ಅವರಿಗೆ ಕಷ್ಟಕರವಾಗುತ್ತದೆ, ಅದು ನಂತರ ನಿರಾಶೆ ಮತ್ತು ಖಿನ್ನತೆಗೆ ಕಾರಣವಾಗುತ್ತದೆ.



ಎಲ್ಲಾ ವ್ಯಕಿಗಳಲ್ಲೂ ಸಾಮರ್ಥ್ಯ, ಕೌಶಲ್ಯ ಮತ್ತು ಬುದ್ಧಿಮಟ್ಟ ಒಂದೇ ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಆಪ್ಟಿಟ್ಯೂಡ್ ಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡುವುದು ಅತ್ಯಗತ್ಯ.
ವಿವಿಧ ವೃತ್ತಿಗಳಿಗೆ ವಿಭಿನ್ನ ಕೌಶಲ್ಯಗಳು ಅಗತ್ಯ. ಒಂದು ವೃತ್ತಿಗೆ ವೈಜ್ಞಾನಿಕ ಸಾಮರ್ಥ್ಯ ಬೇಕಾದರೆ,ಇನ್ನೊಂದು ವೃತ್ತಿಗೆ ಗಣಿತ ತಾರ್ಕಿಕ ಸಾಮರ್ಥ್ಯ, ಮತ್ತೊಂದು ವೃತ್ತಿಗೆ ಮೌಖಿಕ ಕೌಶಲ್ಯಗಳು ಮುಖ್ಯವಾಗುತವೆ. ಆಪ್ಟಿಟ್ಯೂಡ್ ಎಂದರೆ, ಪ್ರತಿಯೊಬ್ಬರಲ್ಲೂ ಸಹಜವಾಗಿರುವ ಪ್ರತಿಭೆ, ಸಾಮರ್ಥ್ಯ ಅಥವಾ ಕೌಶಲ್ಯ ಮತ್ತು ಅದು ಆಯ್ಕೆಮಾಡುವ ವೃತ್ತಿಗೆ ಆದರ್ಶಪ್ರಾಯವಾಗಿ ಹೊಂದಿರಬೇಕು.
೧೨ ನೇ ತರಗತಿಯ ಟಾಪರ್ ವೈದ್ಯಕೀಯದಲ್ಲಿ ಅಥವಾ ಇಂಜಿನಯರಿಂಗ್ ನಲ್ಲಿ ಯಶಸ್ವಿಯಾಗಲೇ ಬೇಕೆಂದಿಲ್ಲ. ಆತನು ಬ್ಯಾಂಕಿಂಗ್ ಅಥವಾ ಹಣಕಾಸು ಕ್ಷೇತ್ರದಲ್ಲಿ ಉತ್ತಮನಾಗಿರಬಹುದು. ಬಹುರಾಷ್ಟ್ರೀಯ ಕಂಪೆನಿಗಳು ಸಂದರ್ಶನ ಮತ್ತು ವೃತ್ತಿಗೆ ತಕ್ಕುದಾದ ಲಿಖಿತ ಪರೀಕ್ಷೆಗಳ ಮೂಲಕ ನೌಕರರನ್ನು ಆಯ್ಕೆ ಮಾಡುವುದು ಹೇಗೋ, ಯುವಕರು ಸರಿಯಾದ ವೃತ್ತಿ ಆಯ್ಕೆ ಮಾಡಿಕೊಳ್ಳಲು ಆಪ್ಟಿಟ್ಯೂಡ್ ಟೆಸ್ಟಗಳು ಸಹ ಅಷ್ಟೇ ಮುಖ್ಯ.
ಆಪ್ಟಿಟ್ಯೂಡ್ ಟೆಸ್ಟ್ ಅಥವಾ ಕೆರಿಯರ್ ಟೆಸ್ಟ್ ವ್ಯಕ್ತಿಯ ಸಾಮರ್ಥ್ಯ, ಜ್ಞಾನಮಟ್ಟ ಮತ್ತು ಬಲ-ದುರ್ಬಲತೆಗಳನ್ನು ಅಳೆಯುತ್ತದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿ ,ಕೌಶಲ್ಯ, ಮೌಲ್ಯಗಳು ಮತ್ತು ವ್ಯಕ್ತಿತ್ವಕ್ಕೆ ಹೊಂದುವ ವೃತ್ತಿ ಯಾವುದು ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ವೃತ್ತಿಯನ್ನು ಕೇವಲ ಬಯಕೆಯ ಮೇಲೆ ಆರಿಸಬಾರದು, ಬದಲಿಗೆ ಈ ಪರೀಕ್ಷೆಯಿಂದ ಜೀವನಕ್ಕೆ ಹೆಚ್ಚು ಸೂಕ್ತವಾದ ದಾರಿಯನ್ನು ಕಂಡುಕೊಳ್ಳಬಹುದು. ವಿದ್ಯಾರ್ಥಿಗಳು ಹೈಸ್ಕೂಲ್ ಗೆ ಬಂದಾಗಲೇ ಈ ಪರೀಕ್ಷೆಯನ್ನು ಬರೆಯುವುದು ಉತ್ತಮ.
ಇಂದಿನ ದಿನದಲ್ಲಿ ಅನೇಕ ಕಾಲೇಜುಗಳು ಪ್ರವೇಶಕ್ಕೂ ಮೊದಲು ಪ್ರವೇಶ ಪರೀಕ್ಷೆಗಳನ್ನು ಕಡ್ಡಾಯ ಮಾಡಿವೆ. ಅವುಗಳೂ ಆಪ್ಟಿಟ್ಯೂಡ್ ಪರೀಕ್ಷೆಯೇ, ಏಕೆಂದರೆ ಅವು ವಿದ್ಯಾರ್ಥಿಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತವೆ. ಅಂಕಗಳಿಗಿಂತಲೂ ವಿದ್ಯಾರ್ಥಿಯ ಆಸಕ್ತಿ ಮತ್ತು ಆಪ್ಟಿಟ್ಯೂಡ್ ಹೆಚ್ಚು ಪ್ರಮುಖ. ಈ ಪರೀಕ್ಷೆಗಳು ನಿರ್ಧಿಷ್ಟ ಕೋರ್ಸ್ ಗಳಿಗೆ ಅಗತ್ಯವಿರುವ ಸಾಮರ್ಥ್ಯವನ್ನು ದಾಖಲಿಸುವುದರಿಂದ ಅಭ್ಯರ್ಥಿ ಆ ಕೋರ್ಸ್ ಗೆ ಸೂಕ್ತನೇ ಅಲ್ಲವೇ ಎಂದು ತಿಳಿಯಲು ಸಹಾಯಕವಾಗುತ್ತದೆ.
ಬಹು ಜನರು ಇಂಟೆಲಿಜೆನ್ಸ್ ಮತ್ತು ಆಪ್ಟಿಟ್ಯೂಡ್ ಅನ್ನು ಒಂದೇ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ ಇವೆರಡೂ ಭಿನ್ನ. ಬುದ್ಧಿಮತ್ತೆ ಮುಖ್ಯವಾಗಿ ಕಲಿಕೆಯ ಸಾಮರ್ಥ್ಯ, ಆದರೆ ಆಪ್ಟಿಟೂಡ್ ಎಂದರೆ ಸಹಜ ಪ್ರತಿಭೆ. ಉದಾಹರಣೆಗೆ- ಗಣಿತ ಸಂಖ್ಯೆಗಳು, ಕಲೆ, ಭಾಷೆಗಳು ಹೀಗೆ ನಿರ್ಧಿಷ್ಟ ಸಾಮರ್ಥ್ಯಕ್ಕಾಗಿ ಇರುವ ನೈಸರ್ಗಿಕ ಪ್ರತಿಭೆ. ಇಂದಿನ ಶಾಲೆಗಳಲ್ಲೂ ವಿದ್ಯಾರ್ಥಿಗಳು ಕಲಿಕಾ ವಿಭಾಗ ಆಯ್ಕೆ ಮಾಡುವ ಮೊದಲು ಆಪ್ಟಿಟ್ಯೂಡ್ ಟೆಸ್ಟ್ ಬರೆಯಲು ಪ್ರೋತ್ಸಾಹಿಸಲಾಗುತ್ತಿದೆ.
ಆಪ್ಟಿಟ್ಯೂಡ್ ನ ಮಹತ್ವ- ಯಾವ ವೃತ್ತಿಗೆ ಯಾವ ಸಾಮರ್ಥ್ಯ ಬೇಕು ಎಂಬುದನ್ನು ತಿಳಿದಿದ್ದರೆ ಯಾವ ವೃತ್ತಿ ನಿಮಗೆ ಹೆಚ್ಚು ಹೊಂದುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಉದಾಹರಣೆಗೆ- ಇಂಜಿನಿಯರ್ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಗಣಿತದ ಸಾಮರ್ಥ್ಯ ಅಗತ್ಯ. ಈ ವೃತ್ತಿಗಳಿಗೆ ಹೋಗಬೆಕೆಂದಿದ್ದರೆ ಮೊದಲು ತಮಗೆ ಆ ಕೌಶಲ್ಯವಿದೆಯೇ ಎಂದು ಪರಿಶೀಲಿಸಬೇಕು. ಸ್ವಂತ ಆಪ್ಟಿಟ್ಯೂಡ್ ತಿಳಿದುಕೊಳ್ಳುವ ಸರಳ ವಿಧಾನವೆಂದರೆ, ಹಿಂದಿನ ಸಾಧನೆಗಳನ್ನು ಪರೀಕ್ಷಿಸುವುದು. ಹಳೆಯ ಪ್ರಗತಿ ಪತ್ರಿಕೆಗಳನ್ನು ನೋಡಿ ಯಾವ ವಿಷಯದಲ್ಲಿ ಹೆಚ್ಚು ಅಂಕ ಪಡೆದಿದ್ದೀರಿ, ಯಾವ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನೀವು ಮೆರೆಯುತ್ತಿದ್ದೀರಿ ಎಂಬುದನ್ನು ವಿಶ್ಲೇಷಿಸಬೇಕಾಗುತ್ತದೆ. ಇನ್ನೊಂದು ವಿಧಾನ ಎಂದರೆ, ಸಣ್ಣ ಅವಧಿಯ ಇಂಟರ್ನ್ಶಿಪ್ ನ್ನು ತೆಗೆದುಕೊಳ್ಳುವುದು. ಹೊರಗೆ ಆಸಕ್ತಿಕರವಾಗಿ ಕಾಣುವ ವೃತ್ತಿ ವಾಸ್ತವದಲ್ಲಿ ಅಷ್ಟು ರೋಚಕವಾಗಿಲ್ಲದಿರಬಹುದು. ಇಂಟರ್ನ್ಶಿಪ್ ಮೂಲಕ ಆ ವೃತ್ತಿಗೆ ಬೇಕಾದ ಕೌಶಲ್ಯಗಳ ಬಗ್ಗೆ ಸ್ಪಷ್ಟ ಅರಿವು ಬರುತ್ತದೆ ಮತ್ತು ನಿಮ್ಮ ಸಾಮರ್ಥ್ಯ ಅದಕ್ಕೆ ಹೊಂದುತ್ತದೆಯೇ ಎಂಬುದೂ ತಿಳಿಯುತ್ತದೆ.
ಸರಿಯಾದ ವೃತ್ತಿ ನಿರ್ಧಾರ ಅತ್ಯಂತ ಪ್ರಮುಖ. ಈ ನಿರ್ಧಾರದಲ್ಲಿ ಆಪ್ಟಿಟೂಡ್ ಮ್ಯಾಪಿಂಗ್ ಮಹತ್ವದ ಪಾತ್ರ ವಹಿಸುತ್ತದೆ. ಒಂದು ವೃತ್ತಿಯ ಬಗ್ಗೆ ಆಕರ್ಷಕ ಆಗಿರುವುದರಿಂದ ಆ ಮಾರ್ಗಕ್ಕೆ ಹೋಗಬಹುದು,ಆದರೆ ಆ ವೃತ್ತಿಯಲ್ಲಿ ಬೆಳೆದು ಮೆರಗು ತರುವುದಕ್ಕೆ ಆಪ್ಟಿಟ್ಯೂಡ್ ಅತ್ಯಗತ್ಯ.











