ರಣಮಂಗಲ ದೇವಸ್ಥಾನದ ಆಡಳಿತ ಮೊಕ್ತೆಸರ ಶ್ರೀಕೃಷ್ಣ ಬೋಳಿಲ್ಲಾಯರಿಗೆ ಮಾತೃ ವಿಯೋಗ

0

ನಿಡ್ಪಳ್ಳಿ; ಪಾಣಾಜೆ  ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಆರ್ಲಪದವು ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೊಳಿಲ್ಲಾಯರವರ ತಾಯಿ, ಈ ಹಿಂದೆ ಆಡಳಿತ ಮೊಕ್ತೇಸರರಾಗಿದ್ದ ದಿವಂಗತ  ವಾಸುದೇವ ಬೋಳಿಲ್ಲಾಯ ಕಡಮಾಜೆ ಇವರ ಧರ್ಮಪತ್ನಿ ಸತ್ಯಭಾಮಾ( 88 ವ) ವರು ಮಾ.3 ರಂದು  ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪುತ್ರರಾದ ಶ್ರೀ ಕೃಷ್ಣ ಬೊಳಿಲ್ಲಾಯ, ನಿವೃತ್ತ ಶಿಕ್ಷಕ ಶ್ರೀಧರ ಬೊಳಿಲ್ಲಾಯ,ಹರೀಶ್ ಬೊಳಿಲ್ಲಾಯ,ಬೆಂಗಳೂರಿನ ಕಾಲೇಜೋಂದರಲ್ಲಿ ಪ್ರೊಫೆಸರ್ ಆಗಿರುವ ಶ್ರೀಕಾಂತ್ ಬೊಳಿಲ್ಲಾಯ, ಶ್ರೀನಿವಾಸ ಬೊಳಿಲ್ಲಾಯ, ಪುತ್ರಿಯರಾದ ಜಯಲಕ್ಷ್ಮಿ, ಸರೋಜ, ಕಲಾವತಿ, ಪ್ರೇಮ,ಶೋಭಾ, ಸೊಸೆಯಂದಿರಾದ ಜೋತ್ಸ್ನಾರಾಣಿ,ಅರುಣ ಕುಮಾರಿ, ಜಯಶ್ರೀ, ಕವಿತಾ, ಕೀರ್ತಿ, ಅಳಿಯಂದಿರಾದ ಪ್ರಭಾಕರ, ಸತ್ಯನಾರಾಯಣ, ರಾಮ್ ರಾಜ್, ಮೋಹನ ಮತ್ತು ಮೊಮ್ಮಕ್ಕಳು ಹಾಗೂ ಮರಿಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸೇರಿದಂತೆ ಗ್ರಾಮದ ಹಲವಾರು ಗಣ್ಯರು, ಹಿತೈಷಿಗಳು, ಬಂಧು ಬಳಗದವರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here