ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ

0

ಪುತ್ತೂರು:ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್(ರಿ) ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ) ಕಡಬ ತಾಲೂಕು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು, ಸವಣೂರು ಇದರ ಸಹಯೋಗದಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾ.2 ರಂದು ನಡೆಯಿತು.

ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಲ್ಲಿ ಮಾತನಾಡಿ ಯುವಕ ಯುವತಿಯರು ಡ್ರಗ್ಸ್ ಜಾಲದತ್ತ ನಿಲುಕದೆ ಶಿಕ್ಷಣದ ಜೊತೆ ಹೆಜ್ಜೆ ಹಾಕಬೇಕಾಗಿ ಕರೆ ನೀಡಿದರು. ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್(ರಿ) ಕಡಬ, ಇವರ ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆಗಳನ್ನು ಮಾತನಾಡಿ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನು ಸಂಘಟಿಸಿ, ಸಮಾಜದಲ್ಲಿ ಆರೋಗ್ಯಕರ ವಾತಾವರಣ ಮೂಡುವಂತೆ ಮಾಡುವಲ್ಲಿ ಇವರ ಪಾತ್ರ ದೊಡ್ಡದು ಎಂದು ಆಶಿಸಿದರು.


ಸಂಪನ್ಮೂಲ ವ್ಯಕ್ತಿ ಉಡುಪಿ ಪ್ರಾದೇಶಿಕ ಕಛೇರಿಯ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿ, ಮಾದಕವಸ್ತುಗಳು ಕೇವಲ ವ್ಯಕ್ತಿಯ ದೇಹವನ್ನು ಅಲ್ಲ, ಅವರ ಮನಸ್ಸು ಕುಟುಂಬ ಭವಿಷ್ಯ ಇವೆಲ್ಲವನ್ನು ಹಾನಿಗೊಳಿಸುತ್ತದೆ ಎಂದು ಮಕ್ಕಳಲ್ಲಿ ಜಾಗೃತಿಯ ಮನೋಭಾವವನ್ನು ಮೂಡಿಸಿ ಮಕ್ಕಳಲ್ಲಿ ಪ್ರಮಾಣ ವಚನ ಭೋಧಿಸಿದರು.

ಕಡಬ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ, ವಕೀಲ ಮಹೇಶ್ ಕೆ ಸವಣೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ನಿರ್ದೇಶಕ ಪದ್ಮನಾಭ ಶೆಟ್ಟಿ,ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರಿನ ಪ್ರಾಂಶುಪಾಲೆ ಡಾ. ರಾಜಲಕ್ಷ್ಮೀ ಎಸ್ ರೈ ,ಕಡಬ ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ತಾರನಾಥ ಕಾಯರ್ಗ,ಪುಣ್ಚಪ್ಪಾಡಿ ಸಮರ್ಥ ಜನಸೇವಾ ಟ್ರಸ್ಟ್ನ ಅಧ್ಯಕ್ಷ ಗಿರಿಶಂಕರ ಸುಲಾಯ, ಮಂಗಳೂರು ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು,ಸವಣೂರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗೌಡ ಪರಣೆ, ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.

ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿ, ಪವಿತ್ರಾ ನಿರೂಪಿಸಿ, ಕಲ್ಪನಾ ವಂದಿಸಿದರು. ಸರಸ್ವತಿ ಮತ್ತು ಬಳಗ ಆಶಯಗೀತೆಯನ್ನು ಹಾಡಿದರು.

LEAVE A REPLY

Please enter your comment!
Please enter your name here