ಕರ್ನಪ್ಪಾಡಿ ಶ್ರೀ ಬ್ರಹ್ಮ ಬೖೆದೆರ್ಕಳ ಗರಡಿಯಲ್ಲಿ ಬೖೆದೆರುಗಳ ವಾರ್ಷಿಕ ನೇಮೋತ್ಸವ

0

ನಿಡ್ಪಳ್ಳಿ: ಸುಮಾರು 5 ಶತಮಾನಗಳ ಹಿಂದೆ ಮೂಡಿ ಬಂದ ಮಾತೆ ದೇಯಿಬೈದೆತಿಯ ಅವಳಿ ಪುತ್ರರಾದ ಕೋಟಿ ಚೆನ್ನಯರು ನಡೆದಾಡಿದ ಪವಿತ್ರ ನೆಲ ನಿಡ್ಪಳ್ಳಿ ಗ್ರಾಮದ  ಕರ್ನಪ್ಪಾಡಿ ಶ್ರೀ  ಬ್ರಹ್ಮ ಬೖೆದೆರ್ಕಳ ಗರಡಿಯಲ್ಲಿ ಬೖೆದೆರುಗಳ ವಾರ್ಷಿಕ ನೇಮೋತ್ಸವ ಮಾ. 2 ರಂದು ವಿಜೃಂಭಣೆಯಿಂದ ನಡೆಯಿತು.

ಮಾ.2ರಂದು ಸಂಜೆ ಗರಡಿಯಲ್ಲಿ ಶುದ್ದ ಹೋಮ ನಡೆದು ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಬೈದೆರುಗಳ ಗರಡಿ ಇಳಿಯುವುದು ನಂತರ ಕಿನ್ನಿದಾರು ಗರಡಿ ಇಳಿಯುವುದು, ದರ್ಶನ ಪಾತ್ರಿಗಳ ಸೇಟ್, ಬೈದೆರುಗಳ ಸೇಟ್ ನಡೆದು ಮಾ. 3 ರಂದು ಪ್ರಾಃತಕಾಲ  ಪ್ರಸಾದ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಗರಡಿ ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ಕಾರ್ಯದರ್ಶಿ ಮಾಧವ ಪೂಜಾರಿ ರೆಂಜ, ಕೊಡಮಣಿತ್ತಾಯ ದೈವಸ್ಥಾನ ಪ್ರತಿಷ್ಟಾ ಸಮಿತಿ ಗೌರವಾಧ್ಯಕ್ಷ ಜಯಂತ ನಡುಬೈಲು, ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಕ, ಕಾರ್ಯದರ್ಶಿ ರಾಧಾಕೃಷ್ಣ ಆರ್.ಕೋಡಿ, ಕೋಶಾಧಿಕಾರಿ ರಾಜೇಶ್ ನೆಲ್ಲಿತ್ತಡ್ಕ, ಭಾರತಿ ಎಸ್.ನುಳಿಯಾಲು ಹಾಗೂ ಗರಡಿ ಸೇವಾ ಸಮಿತಿ  ಸದಸ್ಯರು, ಕೊಡಮಣಿತ್ತಾಯ ದೈವಸ್ಥಾನ ಪ್ರತಿಷ್ಟಾ ಸಮಿತಿ ಸದಸ್ಯರು, ಕರ್ನಪ್ಪಾಡಿ ತರವಾಡು ಕುಟುಂಬಸ್ಥರು ಮತ್ತು  ಊರ ಪರವೂರ ಸಾವಿರಾರು ಭಕ್ತಾದಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here