






ಈಶ್ವರಮಂಗಲ : ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್, ಗೈಡ್ಸ್, ಕ್ಲಬ್, ಬುಲ್ ಬುಲ್ ಹಾಗೂ ಬನ್ನಿ ದಳಗಳ ಉದ್ಘಾಟನಾ ಸಮಾರಂಭ ಮಾ.4ರಂದು ನಡೆಯಿತು.


ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ನನ್ಯ ಅಚ್ಚುತ ಮೂಡತ್ತಾಯರವರು ಧ್ವಜಾರೋಹಣವನ್ನು ನೆರವೇರಿಸಿ, ಈ ಸಂಘಟನೆಯು ನಮ್ಮ ಶಾಲೆಯಲ್ಲಿ ಮರುಚಾಲನೆಗೊಂಡಿರುವುದು ಬಹಳ ಸಂತೋಷದ ವಿಷಯ ವಿದ್ಯಾರ್ಥಿಗಳಲ್ಲಿ ಶಿಸ್ತು, ಧೈರ್ಯ ಮತ್ತು ಸಮರ್ಪಣಾ ಭಾವನೆ ಹೆಚ್ಚಾಗಲಿ ಎಂದರು.




ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಾಲಾ ಸಂಚಾಲಕರ ಶಿವರಾಂ ಪಿ, ಮುಖ್ಯ ಶಿಕ್ಷಕಿಯರಾದ ಸೌಮ್ಯ ಎ ಮತ್ತು ಲತಾ ಡಿ ಕೆ ಹಾಗೂ ದಳದ ಶಿಕ್ಷಕರು,ಶಾಲಾ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಗಣ್ಯರಿಗೆ ಸ್ಕಾರ್ಫ್ ಹಾಕಿ ಗೌರವಿಸಲಾಯಿತು.ವಿದ್ಯಾರ್ಥಿಗಳಿಗೆ ಸ್ಕಾರ್ಫ್ ವಿತರಿಸಲಾಯಿತು.ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಪ್ರಮೀಳ ಪಿ ಕಾರ್ಯಕ್ರಮ ನಿರೂಪಿಸಿದರು.










