ಪಾಲಡ್ಕ ನೂರುಲ್ ಇಸ್ಲಾಂ ಮದರಸಕ್ಕೆ ಸತತ 10ನೇ ಬಾರಿ 100% ಫಲಿತಾಂಶ- 9 ಮಂದಿ ಡಿಸ್ಟಿಂಕ್ಷನ್ 

0

ಬಡಗನ್ನೂರು : 2025-26 ನೇ ಸಾಲಿನ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಪಾಲಡ್ಕ ಮದರಸ 5,7 ಮತ್ತು 10ನೇ ತರಗತಿಯಲ್ಲಿ ಶೇಖಡ 100 ಫಲಿತಾಂಶ ಪಡೆಯುವ ಮೂಲಕ ಸತತ ಹತ್ತು ವರ್ಷಗಳಿಂದ 100 ಫಲಿತಾಂಶ ಪಡೆದುಕೊಂಡಿದೆ. 

10ನೇ 4 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿ 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ಉತ್ತಿರ್ಣರಾಗಿದ್ದಾರೆ.10 ನೇ ತರಗತಿಯ ಮುಹಮ್ಮದ್ ಸಫ್ವಾನ್  373/400,  ಫಾತಿಮತ್ ತಫ್ಸೀರ 363/400, ಮರಿಯಮ್ ಶೈಮಾ 379/400, ಫಾತಿಮತ್ ಅಫೀಫ 369/400  ಡಿಸ್ಟಿಂಕ್ಷನ್ ಪಡೆದು ತೇರ್ಗಡೆಗೊಂಡಿದ್ದಾರೆ.

7 ನೇ ತರಗತಿಯ 2 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿ ಫಾತಿಮತ್ ಸುಹಾನ 551/600, ಮುಹಮ್ಮದ್ ನಿಹಾದ್ 558/600 ಡಿಸ್ಟಿಂಕ್ಷನ್ ಪಡೆದು ತೆರ್ಗಡೆ ಹೊಂದಿದ್ದಾರೆ .

5ನೇ ತರಗತಿಯ  ಖದೀಜತ್ ಅಝೀಮ 583/600, ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ  ಶಾಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ ,  ಆಯಿಷತ್ ಸನ್ಹ 499/600, ತ್ವಾಹಿರ್ ಅಹ್ಮದ್ 513/600, ಶಬ್ನ ಫಾತಿಮ 570/600 ಡಿಸ್ಟಿಂಕ್ಷನ್‌ ಪಡೆದು ತೇರ್ಗಡೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here