ಏ.12: ಗೋಳಿತ್ತೊಟ್ಟು ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ರಜತ ಸಂಭ್ರಮ

0

ಗೋಳಿತ್ತೊಟ್ಟು: ಕೊಣಾಲು ಗ್ರಾಮದ ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಸ್ಥಾಪನೆಯಾಗಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಜತ ಸಂಭ್ರಮ ಕಾರ್ಯಕ್ರಮವನ್ನು ಏಪ್ರಿಲ್ 12ರಂದು ಆಚರಿಸಲಾಗುತ್ತಿದೆ.


ಈ ಪ್ರಯುಕ್ತ ಮಾ.2ರಿಂದ ಕೊಣಾಲು ಗ್ರಾಮದ ಪ್ರತಿ ಹಿಂದೂ ಮನೆಗಳಿಗೆ ಭೇಟಿ ನೀಡಿ ಮನೆ–ಮನ ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಗ್ರಾಮದಾದ್ಯಂತ ಧಾರ್ಮಿಕ ಭಾವನೆ ಮೂಡಿಸುವ ಕಾರ್ಯ ನಡೆಯಲಿದೆ. ರಜತ ಸಂಭ್ರಮದ ಅಂಗವಾಗಿ ಏಪ್ರಿಲ್ 12ರಂದು ಸ್ಥಳೀಯ ವಿವಿಧ ತಾಲೂಕುಗಳ 60ಕ್ಕೂ ಅಧಿಕ ಭಜನಾ ತಂಡಗಳ ಭಾಗವಹಿಸುವಿಕೆಯಿಂದ ಭಜನಾ ಸಮಾವೇಶ, ಧಾರ್ಮಿಕ ಸಭೆ ಹಾಗೂ ಯಕ್ಷಗಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಲು ಸಮಿತಿ ತಯಾರಿ ನಡೆಸುತ್ತಿದೆ.


ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಪ್ರವೀಣ್ ಭಂಡಾರಿ ಪುರ ಹಾಗೂ ಭಜನಾ ಮಂಡಳಿಯ ಅಧ್ಯಕ್ಷ ಭೀಮ ಭಟ್ ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here