ಬ್ರಹ್ಮಕಲಶೋತ್ಸವ: ಅನುಶ್ರೀ ಅಭಿಲಾಷ್ ಅವರಿಂದ ಸಂಗೀತ ಕಾರ್ಯಕ್ರಮ

0

ಪುತ್ತೂರು: ಕಾಸರಗೋಡು ಜಿಲ್ಲೆಯ ಕುಂಬಡಾಜೆ ಸಮೀಪದ ಮುನಿಯೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಶ್ರೀ ದೇವರ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಸಾನ್ನಿಧ್ಯದಲ್ಲಿ ನೆರವೇರಿದವು.

ದೇವರ ಪ್ರತಿಷ್ಠಾ ಮಹೋತ್ಸವದ ದಿನವಾದ ಮಾರ್ಚ್ 6ರಂದು ಅನುಶ್ರೀ ಅಭಿಲಾಷ್ ಕಡಂಬಳಿತ್ತಾಯ (ಮಾಲೆಂಕಿ) ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಅವರ ಗಾಯನಕ್ಕೆ ಮೃದಂಗದಲ್ಲಿ ಮಾ| ಆಶ್ರಿತ್ ಕೃಷ್ಣ ದಾಳಿಂಬ ಹಾಗೂ ವಾಯಲಿನ್‌ನಲ್ಲಿ ಕುಮಾರಿ ಪ್ರಜ್ಞಾ ನಿಡ್ವಣ್ಣಾಯ ಅವರು ಸಾಥ್ ನೀಡಿದರು.
ಕಾರ್ಯಕ್ರಮದ ಬಳಿಕ ದೇವಸ್ಥಾನದ ವತಿಯಿಂದ ಕಲಾವಿದರನ್ನು ಪ್ರಸಾದ ನೀಡಿ ಗೌರವಿಸಲಾಯಿತು. ಭಕ್ತರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here