ಪ್ರಬಂಧ ಸ್ಪರ್ಧೆಯಲ್ಲಿ ಸುದಾನ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ

0

ಪುತ್ತೂರು: ಪುತ್ತೂರಿನ ಸುದಾನ ಶಾಲೆಯಲ್ಲಿ ಕರ್ನಾಟಕ ರಾಜ್ಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯು ಪುತ್ತೂರು ಸಮಿತಿಯ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿತ್ತು. “ ದೈನಂದಿನ ಜೀವನದಲ್ಲಿ  ಕೃತಜ್ಞತೆಯ ಪಾತ್ರ” ಎಂಬ ವಿಷಯದ ಬಗ್ಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಶಾಲೆಯ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇವರಲ್ಲಿ ಕನ್ನಡ ಪ್ರಬಂಧ ರಚನೆಯಲ್ಲಿ ಅಭಿಜ್ಞಾ ಎ-ಪ್ರಥಮ , ಸ್ವೀಕೃತಿ-ದ್ವಿತೀಯ ಮತ್ತು ವಂಶಿ ತೃತೀಯ ಬಹುಮಾನ ಪಡೆದಿದ್ದಾರೆ.ಇಂಗ್ಲೀಷ್ ಪ್ರಬಂಧ ರಚನೆಯಲ್ಲಿ ತನ್ವಿ ಎಂ-ಪ್ರಥಮ, ಶಮಿತಾ ಎಂ -ದ್ವಿತೀಯ ಮತ್ತು ಪಲ್ಲವಿ -ತೃತೀಯ ಬಹುಮಾನವನ್ನು ಪಡೆದಿದ್ದಾರೆ. ವಿಜೇತರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭ ನಾಗರಾಜ್ ಅಭಿನಂದಿಸಿದ್ದಾರೆ. ಲಹರಿ ಸಾಹಿತ್ಯ ಸಂಘದ ಆಶ್ರಯದಲ್ಲಿ ಈ ಸ್ಪರ್ಧೆಯು ನಡೆಯಿತು.

LEAVE A REPLY

Please enter your comment!
Please enter your name here