






ಪುತ್ತೂರು: ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ದೇಶದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಸರಬರಾಜಿನ ಮೇಲೆ ಪರಿಣಾಮ ಬೀರಿದಾಗ ದೇವಳದಲ್ಲಿ ನಿತ್ಯ ಅಡುಗೆಗೆ ಕಟ್ಟಿಗೆ ಒಲೆ ಆರಂಭಿಸಿದಾಗ ದೇವಳಕ್ಕೆ ಭಕ್ತರು ಕಟ್ಟಿಗೆಯನ್ನು ಸೇವಾ ರೂಪದಲ್ಲಿ ಪೂರೈಕೆ ಮಾಡಿದ್ದರು. ಇದೀಗ ಭಕ್ತರೊಬ್ಬರು ಕಟ್ಟಿಗೆ ತುಂಡು ಮಾಡಲು ಯಂತ್ರದ ಸೇವೆಯನ್ನು ದೇವಳಕ್ಕೆ ಸೇವಾ ರೂಪದಲ್ಲಿ ನೀಡಿದ್ದಾರೆ.


ಪ್ರತಿ ದಿನ ಸಾವಿರಾರು ಮಂದಿಗೆ ಅನ್ನಪ್ರಸಾದ ನೀಡುತ್ತಿರುವ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗ್ಯಾಸ್ ಬದಲು ಒಲೆಯಲ್ಲಿ ಅಡುಗೆ ಪ್ರಾರಂಭವ ಮಾಡುವ ನಿಟ್ಟಿನಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ತನ್ನ ಮನೆಯಿಂದಲೇ ಕಟ್ಟಿಗೆ ಪೂರೈಕೆ ಮಾಡಿದ್ದರು. ಸುದ್ದಿ ತಿಳಿದು ಭಕ್ತರು ಕೂಡಾ ದೇವಳಕ್ಕೆ ಕಟ್ಟಿಗೆಯನ್ನು ಸೇವಾ ರೂಪದಲ್ಲಿ ನೀಡಿದರು. ಇದೀಗ ಭಕ್ತರು ನೀಡಿದ ಕಟ್ಟಿಗೆಯನ್ನು ಒಡೆಯಲು ಯಂತ್ರದ ಅವಶ್ಯಕತೆಯಿದ್ದು, ಅದನ್ನು ಮನೋಜ್ ಕುಮಾರ್ ಅಜ್ಜಿಕಲ್ಲು ಎಂಬವರು ದೇವಳದಲ್ಲಿ ಕಟ್ಟಿಗೆಯನ್ನು ಒಡೆಯಲು ತಮ್ಮ ಯಂತ್ರದ ಸೇವೆಯನ್ನು ನೀಡಿದ್ದಾರೆ. ಗಂಟೆಗೆ ಸುಮಾರು ರೂ. 900 ದರದಲ್ಲಿ ಕಟ್ಟಿಗೆ ಒಡೆಯುವ ಯಂತ್ರವನ್ನು ದೇವಳದಲ್ಲಿ ಭಕ್ತರು ತಂದು ಹಾಕಿರುವ ಕಟ್ಟಿಗೆಯನ್ನು ಒಡೆಯಲು ಉಚಿತ ಸೇವೆಯನ್ನು ಅವರು ನೀಡಿದ್ದಾರೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ವಿನಂತಿಯ ಮೇರೆಗೆ ಮನೋಜ್ ಕುಮಾರ್ ಅವರು ತಮ್ಮ ಯಂತ್ರದ ಉಚಿತ ಸೇವೆ ದೇವಳಕ್ಕೆ ನೀಡಿದ್ದಾರೆ. ಮನೋಜ್ ಕುಮಾರ್ ಅವರಿಗೆ ಮಾ.13ರಂದು ಬೆಳಗ್ಗೆ ದೇವಳದಲ್ಲಿ ಪ್ರಸಾದ ನೀಡಿ ಕಟ್ಟಿಗೆ ಒಡೆಯುವ ಯಂತ್ರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ಬೆಡೇಕರ್, ಯಂತ್ರದ ಮಾಲಕ ಮನೋಜ್ ಕುಮಾರ್ ಅಜ್ಜಿಕಲ್ಲು, ಕುಂಜೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರೋಹನ್ರಾಜ್, ಪವಿತ್ರ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.












