ರೋಪ್ ಸ್ಕಿಪ್ಪಿಂಗ್, ಜಂಪ್ ರೋಪ್ ಸ್ಪರ್ಧೆ : ಕಾಂಚನ ಶಾಲೆಗೆ ರಾಜ್ಯಮಟ್ಟದಲ್ಲಿ 7 ಚಿನ್ನದ ಪದಕ

0

ಉಪ್ಪಿನಂಗಡಿ: ರಾಜ್ಯ ಮಟ್ಟದ ರೋಪ್ ಸ್ಕಿಪ್ಪಿಂಗ್ ಮತ್ತು ಜಂಪ್ ರೋಪ್ ಸ್ಪರ್ಧೆಯಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಏಳು ಚಿನ್ನದ ಪದಕಗಳೊಂದಿಗೆ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.


14ರ ವಯೋಮಾನದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಯೋಚಿತ್, ಶ್ರವಣ್ ವಿ. ರೈ, ಶ್ರೇಯಸ್, ಆದಿತ್ಯ ಮತ್ತು ಭೂಮಿಕಾ, ಹಿತಶ್ರೀ, ಸಾಹಿತ್ಯರವರು ಪ್ರಥಮ ಸ್ಥಾನ ಪಡೆದಿದ್ದು, ಏಳು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಾಲಾ ಮುಖ್ಯ ಶಿಕ್ಷಕರಾದ ಎ. ಲಕ್ಷ್ಮಣ ಗೌಡ ಇವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಹೇಮೋಧರ್ ಇವರು ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here