








ಕಾಣಿಯೂರು: ಪವಿತ್ರ ತಿಂಗಳಾದ ರಂಝಾನಿನಲ್ಲಿ ನಾವು ಅಲ್ಲಾಹನ ಸ್ಮರಣೆಯೊಂದಿಗೆ ಆಧ್ಯಾತ್ಮಿಕತೆ ಮೈಗೂಡಿಸಿದಂತೆ ರಂಝಾನಿನ ಬಳಿಕವೂ ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಬೇಕು.ಎಲ್ಲರಿಗೂ ಒಳ್ಳೆಯದನ್ನು ಬಯಸುವ ಹೃದಯ ವೈಶಾಲ್ಯತೆ ನಮಗಿರಬೇಕು.ಯುವ ಸಮೂಹವು ಯಾವುದೇ ಕಾರಣಕ್ಕೂ ಲಹರಿ ಪದಾರ್ಥಗಳ ವ್ಯಸನಿಗಳಾಗಬಾರದು.ಯುವಕರು ಪ್ರತ್ಯೇಕವಾಗಿ ಬೈಕ್ ಕಾರು ಚಲಾಯಿಸುವಾಗಿ ಕಾನೂನು ಪಾಲಿಸುವುದರೊಂದಿಗೆ ಅತೀವ ಜಾಗರೂಕತೆ ವಹಿಸಬೇಕು ಎಂದು ಪಳ್ಳತ್ತಾರು ಖತೀಬ್ ಶೆರೀಫ್ ಸಖಾಫಿ ಈದ್ ಸಂದೇಶ ನೀಡಿದರು.ಬಳಿಕ ಈದ್ ನಮಾಝಿಗೆ ನೇತೃತ್ವ ನೀಡಿ ಖುತ್ಬಾ ಪಾರಾಯಣ ನಡೆಸಿದರು.ಈ ಸಂದರ್ಭದಲ್ಲಿ ಜಮಾಅತಿನ ಪದಾಧಿಕಾರಿಗಳು ಹಾಗೂ ಜಮಾಅತರು ಉಪಸ್ಥಿತರಿದ್ದರು.













