






ಕುಟುಂಬ ಸಂಬಂಧ ಬೆಸೆಯಲು ಈದ್ ಹಬ್ಬ ಉತ್ತಮ ಸಂದರ್ಭ-ನಾಸಿರ್ ಫೈಝಿ


ಪುತ್ತೂರು: ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ ಮಾ.20ರಂದು ನಡೆಯಿತು.



ವಿಶೇಷ ನಮಾಜ್ ಗೆ ನೇತೃತ್ವ ನೀಡಿದ ಸ್ಥಳೀಯ ಖತೀಬ್ ನಾಸಿರ್ ಫೈಝಿ ಮಾತನಾಡಿ,ಈದುಲ್ ಫಿತರ್ ಹಬ್ಬವನ್ನು ಸಂತೋಷ ಸಡಗರದಿಂದ ಆಚರಿಸಬೇಕಾಗಿದ್ದು ಪರಸ್ಪರ ಕುಟುಂಬ ಸಂಬಂಧ ಬೆಸೆಯುವುದರ ಜೊತೆಗೆ ಹೃದಯಗಳನ್ನು ಶುದ್ದಿಗೊಳಿಸಬೇಕು ಎಂದು ಹೇಳಿದರು.
ಯುದ್ಧದಿಂದ ಅನಿವಾಸಿಗಳು ಸೇರಿದಂತೆ ಎಲ್ಲರಿಗೂ ತೊಂದರೆ ಉಂಟಾಗಿದ್ದು ವಿಶ್ವ ಶಾಂತಿಗಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಅವರು ಕರೆ ನೀಡಿದರು.ಸದರ್ ಅಬೂಬಕ್ಕರ್ ಮುಸ್ಲಿಯಾರ್, ರೆಂಜಲಾಡಿ ಮಸೀದಿಯ ಅಧ್ಯಕ್ಷ ಆರ್.ಎಂ ಅಲಿ ಹಾಜಿ, ಪ್ರಧಾನ ಕಾರ್ಯದರ್ಶಿ ಝೃನುದ್ದೀನ್ ಹಾಜಿ ಜೆ.ಎಸ್ ಹಾಗೂ ಜಮಾಅತರು ಉಪಸ್ಥಿತರಿದ್ದರು.










