






ಕಡಬ: ಸರಸ್ವತೀ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು 2025-26ರ ಶೈಕ್ಷಣಿಕ ಸಾಲಿನ ಪ್ರತಿಷ್ಠಿತ ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆಯಾಗಿದ್ದಾರೆ.


10ನೇ ತರಗತಿಯ ಕೀರ್ತನ್‌ಕುಮಾರ್ ಪಿ ಇವರು ಎಡಮಂಗಲ ಗ್ರಾಮದ ಪರ್ಲ ನಿವಾಸಿಗಳಾದ ಪ್ರವೀಣ ಕುಮಾರ್ ಪಿ ಹಾಗೂ ಶ್ರೀಮತಿ ಗೀತಾವತಿ ಕೆ.ಸಿ ದಂಪತಿಯ ಪುತ್ರನಾಗಿದ್ದಾರೆ. 9ನೇ ತರಗತಿಯ ದಿಗಂತ್ ಇವರು ನೂಜಿಬಾಳ್ತಿಲ ಗ್ರಾಮದ ಹಳೆನೂಜಿ ನಿವಾಸಿಗಳಾದ ಕುಸುಮಾಧರ ಹಾಗೂ ಶ್ರೀಮತಿ ಲತಾ ದಂಪತಿಯ ಪುತ್ರನಾಗಿದ್ದಾರೆ. 8ನೇ ತರಗತಿಯ ಎನ್.ಕೆ. ಯಶ್ವಿತ್ ಇವರು ಕಡಬ ಗ್ರಾಮದ ಕೋಡಿಬೈಲು ನಿವಾಸಿಗಳಾದ ನಾಗಣ್ಣ ಕೆ ಹಾಗೂ ಶ್ರೀಮತಿ ಪ್ರೇಮ ದಂಪತಿಯ ಪುತ್ರನಾಗಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಕಾವ್ಯ ಹರಿಕೃಷ್ಣ ಅವರು ಮಾರ್ಗದರ್ಶನ ನೀಡಿರುತ್ತಾರೆ.













